ವಾರ್ಷಿಕ 125 ದಿನ ಉದ್ಯೋಗ

ಬಾದನಹಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಿಬಿ ಜಿ ರಾಮ್ ಜಿ ಯೋಜನೆ ಜಾಗೃತಿ ಜಾಥಾಕ್ಕೆ ತಾಪಂ ಪ್ರಭಾರ ಇಒ ರೇಣುಕಾಚಾರ್ಯ ಸ್ವಾಮಿ ಚಾಲನೆ ನಿಡಿದರು. ತಾಪಂ ಎಡಿ ಶಿವರಾಮ ರೆಡ್ಡಿ, ಪಿಡಿಒ ಅನಿಲ್ ಕುಮಾರ್, ಚಂದ್ರಶೇಖರ ಇತರರಿದ್ದರು.
ಬಾದನಹಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಿಬಿ ಜಿ ರಾಮ್ ಜಿ ಯೋಜನೆ ಜಾಗೃತಿ ಜಾಥಾಕ್ಕೆ ತಾಪಂ ಪ್ರಭಾರ ಇಒ ರೇಣುಕಾಚಾರ್ಯ ಸ್ವಾಮಿ ಚಾಲನೆ ನಿಡಿದರು. ತಾಪಂ ಎಡಿ ಶಿವರಾಮ ರೆಡ್ಡಿ, ಪಿಡಿಒ ಅನಿಲ್ ಕುಮಾರ್, ಚಂದ್ರಶೇಖರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಾಪಂ ಪ್ರಭಾರ ಇಒ ರೇಣುಕಾಚಾರ್ಯ ಸ್ವಾಮಿ ಮಾಹಿತಿ
ಕುರುಗೋಡು: ಗ್ರಾಮೀಣ ಭಾಗದ ಅಕುಶಲ ಕಾರ್ಮಿಕರಿಗೆ ಉದ್ಯೋಗ ನೀಡುವ ಜತೆಗೆ ಮೂಲಸೌಕರ್ಯ ಅಭಿವೃದ್ಧಿಗೆ ವಿಬಿ ಜಿ ರಾಮ್ ಜಿ ಯೋಜನೆ ಸಹಕಾರಿಯಾಗಲಿದೆ ಎಂದು ತಾಪಂ ಪ್ರಭಾರ ಇಒ ರೇಣುಕಾಚಾರ್ಯ ಸ್ವಾಮಿ ಹೇಳಿದರು.
ಬಾದನಹಟ್ಟಿ ಗ್ರಾಮದಲ್ಲಿ ಗ್ರಾಪಂನಿಂದ ಸೋಮವಾರ ಹಮ್ಮಿಕೊಂಡಿದ್ದ ವಿಬಿ ಜಿ ರಾಮ್ ಜಿ ಯೋಜನೆಯ ಪ್ರಚಾರ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ಮೊದಲು ಪ್ರತಿ ಕುಟುಂಬಕ್ಕೆ ವರ್ಷದಲ್ಲಿ 100ದಿನ ಉದ್ಯೋಗ ನೀಡಲಾಗುತ್ತಿತ್ತು. ಈಗ ವಾರ್ಷಿಕ 125ದಿನ ಉದ್ಯೋಗ ನೀಡುವುದರೊಂದಿಗೆ ಕೂಲಿ ಮೊತ್ತವನ್ನು 382ರೂ.ಗೆ ಹೆಚ್ಚಳ ಮಾಡಲಾಗಿದೆ. ಕಾರ್ಮಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಗ್ರಾಮದ ಶ್ರೀ ಉಡುಸಲಮ್ಮ ದೇವಿ ದೇವಸ್ಥಾನದ ಆವರಣದಿಂದ ಆರಂಭಗೊಂಡ ಜಾಗೃತಿ ಜಾಥಾ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿತು. ವಿಬಿ ಜಿ ರಾಮ್ ಜಿ ಯೋಜನೆಯ ಮಾಹಿತಿ ಒಳಗೊಂಡ ಕರಪತ್ರ ಬಿಡುಗಡೆಗೊಳಿಸಲಾಯಿತು. ತಾಪಂ ಎಡಿ ಶಿವರಾಮ ರೆಡ್ಡಿ, ಪಿಡಿಒ ಅನಿಲ್ ಕುಮಾರ್, ಚಂದ್ರಶೇಖರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net