ಮಾರೆಮ್ಮ ದೇವಸ್ಥಾನ ನಿರ್ಮಾಣಕ್ಕೆ 10 ಲಕ್ಷ ರೂ. ಕೊಡಿ

ಅಂಜನಾಪುರ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಜೆ.ಎನ್.ಗಣೇಶ್ ಚಾಲನೆ ನೀಡಿದರು.
ಅಂಜನಾಪುರ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಜೆ.ಎನ್.ಗಣೇಶ್ ಚಾಲನೆ ನೀಡಿದರು.
Published on
ಕಂಪ್ಲಿ: ಹೊನ್ನಳ್ಳಿ ಗ್ರಾಮದ ಕೆಂಚಮ್ಮ ಗುಡಿ ಓಣಿಯಲ್ಲಿ ಚರಂಡಿ ನಿರ್ಮಿಸಲಾಗುವುದು ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.
ಹೊನ್ನಳ್ಳಿ ಗ್ರಾಮದಲ್ಲಿ ಮೂರು ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಶುಕ್ರವಾರ ಮಾತನಾಡಿದರು. ಕೆಂಚಮ್ಮ ಗುಡಿ ಓಣಿಯಲ್ಲಿ ಚರಂಡಿ ಇಲ್ಲದ್ದರಿಂದ ಮಳೆ ನೀರು ಮನೆಗೆ ನುಗ್ಗುತ್ತಿದ್ದು, ಚರಂಡಿ ವ್ಯವಸ್ಥೆ ಕಲ್ಪಿಸಬೇಕು. ಗ್ರಾಮದ ಆರಾಧ್ಯದೇವತೆ ಮಾರೆಮ್ಮ ದೇವಸ್ಥಾನ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದ್ದು, 10 ಲಕ್ಷ ರೂ. ಅನುದಾನ ಒದಗಿಸುವಂತೆ ಗ್ರಾಮಸ್ಥರಾದ ಕೋಳಿ ಗಂಗಮ್ಮ, ಕರಿಬಸಮ್ಮ, ಲಕ್ಷ್ಮೀ, ಶಾಂತಮ್ಮ, ಸುಭಾನ್ ಸಾಬ್, ಸಿಂಗಾರಿ ಜಡೆಪ್ಪ, ರಾಜಸಾಬ್, ದೇವರಾಜ, ಅಕ್ಬರ್ ಸಾಬ್, ಸಿ.ಭೀಮಪ್ಪ, ಕುಮಾರಗೌಡ, ಸಿದ್ರಾಮಪ್ಪ, ಕೆ.ಇಬ್ರಾಹಿಂ ಇತರರು ಒತ್ತಾಯಿಸಿದರು.
ಅಂಜನಾಪುರ ಗ್ರಾಮದಿಂದ ಮೆಟ್ರಿ ಮುಖ್ಯರಸ್ತೆವರೆಗೆ 1.50 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಜೆ.ಎನ್.ಗಣೇಶ್ ಚಾಲನೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net