ತಪ್ಪದೇ ಮತದಾನ ಮಾಡಿ, ಪಾಲಿಕೆ ಆಯುಕ್ತ ಜಿ.ಖಲೀಲ್ಸಾಬ್ ಹೇಳಿಕೆ

13 YERRISWAMY 15
ಬಳ್ಳಾರಿಯ ನಗರ ವ್ಯಾಪ್ತಿಯಲ್ಲಿ ಮಹಾನಗರ ಪಾಲಿಕೆ ವತಿಯಿಂದ ಶುಕ್ರವಾರ ಮತದಾನ ಜಾಗೃತಿ ನಡೆಯಿತು. ಆಯುಕ್ತ ಖಲೀಲ್ ಸಾಬ್ ಇದ್ದರು.
Published on

ಬಳ್ಳಾರಿ: ಎಲ್ಲಾ ಮತದಾರರು ಮೇ 7 ರಂದು ನಡೆಯುವ ಲೋಕಸಭಾ ಚುನಾವಣೆಗೆ ತಪ್ಪದೇ ಮತದಾನ ಮಾಡಬೇಕು ಎಂದು ಪಾಲಿಕೆ ಆಯುಕ್ತ ಜಿ.ಖಲೀಲ್ಸಾಬ್ ಹೇಳಿದರು.

ನಗರದ ವ್ಯಾಪ್ತಿಯ ಭಗತಸಿಂಗ್ ನಗರ, ಹರಿಶ್ಚಂದ್ರ ನಗರ, ಕನ್ನಡ ನಗರ, ಹುಸೇನ್ ನಗರ, ರಾಮಯ್ಯ ಕಾಲೋನಿ ಮತ್ತು ಮಾರುತಿ ಕಾಲೋನಿ ಪ್ರದೇಶದಲ್ಲಿ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ಶುಕ್ರವಾರ ನಡೆದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮತದಾನ ದಿನದಂದು ಕಡ್ಡಾಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಮತದಾರರು ತಮ್ಮ-ತಮ್ಮ ಹತ್ತಿರದ ಮತಗಟ್ಟೆ ಕುರಿತು ಮಾಹಿತಿ ಹೊಂದಬೇಕು. ಮತದಾನದಿಂದ ಯಾರೂ ಹೊರಗುಳಿಯಬಾರದು.

ಯಾರೂ ಕೂಡ ಯಾವುದೇ ಆಸೆ, ಆಮೀಷಕ್ಕೆ ಒಳಗಾಗಬಾರದು ಎಂದು ಹೇಳಿದರು. ಈ ಸಂದರ್ಭದಲ್ಲಿ ಪಾಲಿಕೆ ವಲಯ ಆಯುಕ್ತರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net