ಬಳ್ಳಾರಿ : ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ವಾಣಿಜ್ಯ ಅಧ್ಯಯನ ವಿಭಾಗದ ವಿದ್ಯಾರ್ಥಿ, ನಗರದ ಶರಣಪ್ಪ ಕಿಲಾರಹಟ್ಟಿ ಅವರಿಗೆ ಪಿಎಚ್‌ಡಿ ಪದವಿ ಲಭಿಸಿದೆ.
ವಿವಿಯ ವಾಣಿಜ್ಯ ಅಧ್ಯಯನ ವಿಭಾಗದ ಪ್ರೊ.ಡಾ.ವಿ. ಜಿಲಾನ್ ಭಾಷಾ ಅವರ ಮಾರ್ಗದರ್ಶನದಲ್ಲಿ ಸಿದ್ದಪಡಿಸಿದ್ದ ‘ ಆ್ಯನ್‌ಎಂಪಿರಿಕಲ್ ಸ್ಟಡಿ ಆಫ್ ಐಪಿಒಸ್ : ಎವಿಡೆನ್ಸ್ ಫ್ರಮ್ ಇಂಡಿಯನ್ ಸ್ಟಾಕ್ ಮಾರ್ಕೇಟ್ ’ ಎಂಬ ಪ್ರಬಂಧ ಮಂಡಿಸಿದ್ದಾರೆ ಎಂದು ವಿವಿ ಪ್ರಕಟಣೆಯಲ್ಲಿ ತಿಳಿಸಿದೆ