ಬಿಎಂಶ್ರೀ ಪುಸ್ತಕ ಪ್ರಶಸ್ತಿಗೆ ಆಯ್ಕೆ

Published on

ಬಳ್ಳಾರಿ : ಜಿಲ್ಲೆಯ ಸಾಹಿತಿ ಸಿದ್ದರಾಮ ಕಲ್ಮಠ ಅವರ ರಚನೆಯ ‘ ಪೈಲ್ವಾನ್ ಪಿಂಜಾರ್ ರಂಜಾನ್ ಸಾಬ್ ’ ಕೃತಿಯ ಸಿದ್ದನಹಳ್ಳಿಯ ಬುದ್ಧ ಬಸವ ಲಿಂಗ ಗಾಂಧಿ ಸಾಂಸ್ಕ್ರತಿಕ ಟ್ರಸ್ಟ್‌ನ ಬಿ.ಎಂ.ಶ್ರೀ ಪುಸ್ತಕ ಪ್ರಶಸ್ತಿಗೆ ಆಯ್ಕೆಯಾಗಿದೆ.

ಇದೇ ಸೆ.28 ರಂದು ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿರುವ ರಾಜ್ಯಮಟ್ಟದ 10ನೇ ಯುವಜನ ಸಾಹಿತ್ಯ, ಸಂಸ್ಕ್ರತಿ ಸಮಾವೇಶದಲ್ಲಿ ಹಿರಿಯ ಸಾಹಿತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್ ಅವರು ಸಿದ್ದರಾಮ ಕಲ್ಮಠ ಅವರಿಗೆ ಪ್ರದಾನ ಮಾಡಲಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷ ಎಸ್.ರಾಮಲಿಂಗೇಶ್ವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

==

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net