ಬಳ್ಳಾರಿ ; ರಾಜ್ಯದಲ್ಲಿ ಕಳೆದ ಬಿಜೆಪಿ ಅವಧಿಗಿಂತ, ಕಾಂಗ್ರೆಸ್ ಸರ್ಕಾರ ಎಲ್ಲ ಇಲಾಖೆಗಳಿಗೆ ಹೆಚ್ಚಿನ ಅನುದಾನ ನೀಡುತ್ತಿದೆ ಎಂದು ಕಾರ್ಮಿಕ ಸಚಿವ ಸಂತೋಷ ಎಸ್.ಲಾಡ್ ಹೇಳಿದರು.
ಇಲ್ಲಿನ ವಾಲ್ಮೀಕಿ ಭವನದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯ ಸರ್ಕಾರ ಯಾವ ಯಾವ ಇಲಾಖೆಯಲ್ಲಿ ಎಷ್ಟು ಅನುದಾನ ನೀಡಿದ್ದೇವೆ ಎಂಬುದು ಮಾಹಿತಿ ನೀಡಲಾಗುವುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ವಲ್ಪ ವ್ಯತ್ಯಾಸ ಇರುವುದು ಸಾಮಾನ್ಯ. ಆದರಿಂದ, ಸರ್ಕಾರವೇ ಬದಲಾವಣೆಯಾಗುತ್ತದೆ ಎಂಬುದು ಉಹಾಪೋಹ ಎಂದರು.
ಸಿದ್ದರಾಮಯ್ಯ ಪೂರ್ಣವಧಿಯ ಸಿಎಂ ಎಂಬುದಾಗಿ ಪ್ರಶ್ನಿಸುವ ಬದಲು, ಪ್ರಧಾನಮಂತ್ರಿ ನರೇಂದ್ರ ಮೋದಿ ಪೂರ್ಣ ಅವಧಿಯಾಗಿ ಪೂರೈಸುವರ ? ಏಕೆಂದರೆ, ರಾಜ್ಯದಲ್ಲಿ ಕಾಂಗ್ರೆಸ್ ಪೂರ್ಣಬಹುಮತದೊಂದಿಗೆ ಸರ್ಕಾರ ರಚನೆಯಾಗಿದೆ. ಆದರೆ, ಕೇಂದ್ರದಲ್ಲಿ ಬಿಜೆಪಿ ಸಮ್ಮಿಶ್ರ ಸರ್ಕಾರದಿಂದ ಆಡಳಿತ ನಡೆಸುತ್ತಿದೆ ಎಂದು ತೀರುಗೇಟು ನೀಡಿದರು.
ವಿಧಾನಪರಿಷತ್ ಸದಸ್ಯ ಕೆ.ರವಿಕುಮಾರ್ ಕಳೆದ ಕೆಲ ತಿಂಗಳ ಹಿಂದೆ ಆಗ ಮುಸ್ಲಿಂ ಹಾಗೂ ಸದ್ಯ ಹಿಂದು ಮಹಿಳೆಯ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಾರೆ. ಸರ್ಕಾರದ ಕಾರ್ಯದರ್ಶಿ ಶಾಲೀನ ರಜನೀಶ್ ಹಿಂದು ಮಹಿಳೆ ಅಲ್ವ, ಅವರಿಗೆ ಏಕೆ ಅವಮಾನ ಮಾಡಿದರು. ಪ್ರಸ್ತುತ ನಾಚಿಕೆ ಬರುವ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ. ಯಾರೇ ಆಗಲಿ ಇನ್ನೊಬ್ಬರ ಬಗ್ಗೆ ಅರಿತು ಮಾತನಾಡಬೇಕು. ರವಿಕುಮಾರ ಕ್ಷಮೆ ಕೇಳಬೇಕು ಎಂಬುದು ಅವರಿಗೆ ಬಿಟ್ಟ ವಿಚಾರ ಎಂದರು.