ಬಳ್ಳಾರಿಯ ಕನ್ಯಕಾಪರಮೇಶ್ವರಿಗೆ ಐದು ಕಿಲೋ ಚಿನ್ನದ ಸೀರೆ, ದೇವಸ್ಥಾನಕ್ಕೆ ಶತಮಾನೋತ್ಸವ ಸಂಭ್ರಮ

070220 Ballari Kanyaka Parameshwari Devi Gold Sari
Published on

ಬಳ್ಳಾರಿ: ನಗರದ ಬ್ರೂಸ್‌ಪೇಟೆಯಲ್ಲಿರುವ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಶುಕ್ರವಾರ ಶತಮಾನೋತ್ಸವದ ಸಂಭ್ರಮ ಮನೆ ಮಾಡಿತ್ತು. ಶತಮಾನೋತ್ಸವ ಹಿನ್ನೆಲೆಯಲ್ಲಿ ಕನ್ಯಕಾಪರಮೇಶ್ವರಿಗೆ ಐದು ಕಿಲೋ ಬಂಗಾರದ ಸೀರೆಯಿಂದ ಅಲಂಕರಿಸಿ ವಿಶೇಷ ಪೂಜೆ ಮಾಡಲಾಯಿತು.

ಶುಕ್ರವಾರ ಬೆಳಗ್ಗೆಯಿಂದ ದೇವಸ್ಥಾನದಲ್ಲಿ ಕುಂಭಾಭಿಷೇಕ, ಹೋಮ, ಕನ್ನಿಕೆಯರ ಪೂಜೆ, ತುಲಾಭಾರ ಸೇವೆ ಸೇರಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಸಂಜೆ ವಾದ್ಯ ಹಾಗೂ ಕೋಲಾಟ ತಂಡದೊಂದಿಗೆ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ೇವಿಗೆ ಚಿನ್ನದ ಸೀರೆ ಮಾಡಿಸಬೇಕೆಂಬ ಉದ್ದೇಶ ಹಿನ್ನೆಲೆಯಲ್ಲಿ ಆರ್ಯವೈಶ್ಯ ಸಮುದಾಯದವರು ತಮ್ಮ ಶಕ್ತಿ ಅನುಸಾರ ನೀಡಿದ ಚಿನ್ನದಿಂದ ಸೀರೆ ತಯಾರಿಸಲಾಗಿದೆ. ನಗರದಲ್ಲಿ 1912ರಲ್ಲಿ ಆರ್ಯವೈಶ್ಯ ಮಂಡಳಿ ಸ್ಥಾಪನೆಯಾಗಿದೆ. ಆಗ ನಗರದ ಪಡವಳ್ಳಿ ಚಿನ್ನವೆಂಕಟರಮಣಪ್ಪ ಎಂಬುವರು ತಮ್ಮ ಇಡೀ ಆಸ್ತಿಯನ್ನು ಕನ್ಯಕಾಪರಮೇಶ್ವರಿ ದೇವಸ್ಥಾನಕ್ಕೆ ಬರೆದುಕೊಟ್ಟಿದ್ದರು. 1920ರಲ್ಲಿ ಜೈಪುರದಿಂದ ಕನ್ಯಕಾ ಪರಮೇಶ್ವರಿ ವಿಗ್ರಹ ತಂದು ಪ್ರತಿಷ್ಠಾಪಿಸಲಾಗಿದೆ. ಕಳೆದ 11 ವರ್ಷಗಳಿಂದ ದೇವಸ್ಥಾನದಲ್ಲಿ ನಿತ್ಯ ಹೋಮ ಮಾಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net