ಬಳ್ಳಾರಿ ಕನಕದುರ್ಗಮ್ಮ ದೇವಸ್ಥಾನದ ಹುಂಡಿಯಲ್ಲಿ 23.31 ಲಕ್ಷ ರೂ. ಸಂಗ್ರಹ

Ballari Kanaka Durgamma Devi
Published on

ಬಳ್ಳಾರಿ: ನಗರದ ಕನಕದುರ್ಗಮ್ಮ ದೇವಸ್ಥಾನದಲ್ಲಿ ಸೋಮವಾರ ಎರಡು ಹುಂಡಿಗಳ ಎಣಿಕೆ ಕಾರ್ಯ ನಡೆದಿದ್ದು, 23.31 ಲಕ್ಷ ರೂ. ಸಂಗ್ರಹವಾಗಿದೆ. ಎರಡು ಸಾವಿರ ಮುಖಬೆಲೆಯ 47, 500 ರೂ.ಯ 1227, 200 ರೂ. ಮುಖಬೆಲೆಯ 428, 100 ರೂ.ಯ 5786 ಹಾಗೂ ಇತರ ನೋಟು, ನಾಣ್ಯಗಳು ಸಂಗ್ರಹವಾಗಿವೆ. ಒಂದು ಹುಂಡಿಯನ್ನು 2019ರ ಅ.15 ಹಾಗೂ ಎರಡನೇ ಹುಂಡಿಯನ್ನು 2019 ಜ.24ರಂದು ಅಳವಡಿಸಲಾಗಿತ್ತು ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಚ್.ಪ್ರಕಾಶರಾವ್ ತಿಳಿಸಿದ್ದಾರೆ. ಹುಂಡಿ ಎಣಿಕೆ ವೇಳೆ ದೇವಸ್ಥಾನದ ಧರ್ಮಕರ್ತರಾದ ಪಿ.ಗಾದೆಪ್ಪ, ಪಿ.ಎಂ.ರಾಜಶೇಖರ ಹಾಗೂ ಇತರರು ಹಾಜರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net