ರಾಜ್ಯದಲ್ಲಿ ಚಿತ್ರ ಪ್ರದರ್ಶನಕ್ಕೆ ತಡೆ

Published on

ಬಳ್ಳಾರಿ ; ನಟ ಕಮಲ್‌ಹಾಸನ್ ಕನ್ನಡದ ಅವಹೇಳನ ಹೇಳಿಕೆ ಖಂಡಿಸಿ, ಇಲ್ಲಿನ ಗಡಗಿ ಚೆನ್ನಪ್ಪ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ ಶೆಟ್ಟಿ )ಬಣ ವತಿಯಿಂದ ಬುಧವಾರ ಪ್ರತಿಭಟನೆ ನಡೆಯಿತು.

ಜಿಲ್ಲಾಧ್ಯಕ್ಷ ವಿ.ಎಚ್. ಹುಲುಗಪ್ಪ ಮಾತನಾಡಿ, ನ್ಯಾಯಾಲಯವೇ ಕನ್ನಡದ ಬಗ್ಗೆ ಅವಹೇಳನ ಮಾತನಾಡಿರುವುದರಿಂದ ಕ್ಷಮೆಯಾಚಿಸುವಂತೆ ಸೂಚಿಸಿದೆ. ಈವರೆಗೂ ಕ್ಷಮೆ ಕೇಳದೆ ಉದ್ಧಟತನ ಮೆರೆಯುತ್ತಿದ್ದಾರೆ. ಕಮಲ್‌ಹಾಸನ್ ನಟನೆಯ ಥಗ್ ಆಫ್ ಲೈಫ್ ಸಿನಿಮಾವು ಜೂ 5 ರಂದು ದೇಶಾದ್ಯಂತ ಬಿಡುಗಡೆಗೊಳುತ್ತಿದೆ. ಆದ್ದರಿಂದ, ರಾಜ್ಯದ ಹಾಗೂ ಜಿಲ್ಲೆಯ ಯಾವ ಚಿತ್ರಮಂದಿರಗಳಲ್ಲಿ ಪ್ರದರ್ಶಿಶಿಸಲು ಸರ್ಕಾರ ಅವಕಾಶ ನೀಡಬಾರದು. ಒಂದು ವೇಳೆ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಲ್ಲಿ ಕಿಚ್ಚು ಹೆಚ್ಚಾಗಲಿದೆ. ಚಿತ್ರಮಂದಿರವನ್ನು ಪುಡಿಪುಡಿ ಮಾಡಿ ಮತ್ತು ಬ್ಯಾನರ್‌ಗಳನ್ನು ಹರಿದು ಹಾಕಲಾಗುತ್ತದೆ ಎಂದು ಎಚ್ಚರಿಸಿದರು. ಬಳಿಕ ತಹಸೀಲ್ದಾರ್ ಅಲಿಮಾ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net