ಬಾಲಿಕಾ ಆದರ್ಶ ವಿದ್ಯಾಲಯ ಪ್ರಥಮ

11Jaggu11-web
ಬೆಳಗಾವಿ ಕೆಎಲ್‌ಇ ಸೊಸೈಟಿಯ ಸ್ವತಂತ್ರ ಪಿಯು ಕಾಲೇಜಿನಲ್ಲಿ ಗುರುವಾರ ಶಾಲಾ ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ವಾಣಿಜ್ಯ ಪ್ರಾಜೆಕ್ಟ್ ಪ್ರದರ್ಶನ ಜರುಗಿತು. ವೇಣುಗೋಪಾಲ ರೆಡ್ಡಿ, ಡಾ. ಸುಬರ್ಣಾ ರಾಯ್ ಇತರರಿದ್ದರು.
Published on

ಬೆಳಗಾವಿ: ಕೆಎಲ್‌ಇ ಸೊಸೈಟಿಯ ಸ್ವತಂತ್ರ ಪಿಯು ಕಾಲೇಜಿನಲ್ಲಿ ಗುರುವಾರ 9ನೇ, 10ನೇ ತರಗತಿ ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ವಾಣಿಜ್ಯ ಪ್ರಾಜೆಕ್ಟ್ ಪ್ರದರ್ಶನ ನಡೆಯಿತು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ, ಪ್ರಾಜೆಕ್ಟ್‌ಗಳ ಮೂಲಕ ತಮ್ಮ ವಿನೂತನ ಕಲ್ಪನೆ ಸಿದ್ಧಪಡಿಸಿ ಪ್ರಸ್ತುತಪಡಿಸಿದರು. ಸ್ಪರ್ಧೆಯಲ್ಲಿ ಬೆಳಗಾವಿಯ ಬಾಲಿಕಾ ಆದರ್ಶ ವಿದ್ಯಾಲಯ ಪ್ರಥಮ ಸ್ಥಾನ ಪಡೆಯಿತು. ಅಮೃತ ವಿದ್ಯಾಲಯ ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಕೆಎಲ್‌ಇ ಇಂಟರ್‌ನ್ಯಾಷನಲ್ ಸ್ಕೂಲ್ ಪಡೆಯಿತು. ವಿಧಾನ ಪರಿಷತ್ತಿನ ಸರ್ಕಾರದ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಪ್ರಾಚಾರ್ಯ ವೇಣುಗೋಪಾಲ ರೆಡ್ಡಿ, ಐಸಿಎಂಆರ್ ನಿರ್ದೇಶಕಿ ಡಾ. ಸುಬರ್ಣಾ ರಾಯ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net