

ಮಂಡ್ಯ: ಬಲಿಜ ಸಮುದಾಯದ ಯುವ ಸಮೂಹದ ಅಭಿವೃದ್ಧಿ, ಸರ್ವತೋಮುಖ ಏಳಿಗೆಯನ್ನು ಪ್ರಮುಖ ಉದ್ದೇಶವಾಗಿಟ್ಟುಕೊಂಡು ರಾಜ್ಯಮಟ್ಟದಲ್ಲಿ ಅಸ್ತಿತ್ವಕ್ಕೆ ತರಲಾಗಿರುವ ಅಖಿಲ ಕರ್ನಾಟಕ ಯೋಗಿನಾರಾಯಣ ಕೃಷ್ಣದೇವರಾಯ ಯುವ ಒಕ್ಕೂಟದ ಉದ್ಘಾಟನಾ ಸಮಾರಂಭ ನ.19ರಂದು ನಗರದಲ್ಲಿ ಏರ್ಪಡಿಸಲಾಗಿದೆ ಎಂದು ಒಕ್ಕೂಟದ ಜಿಲ್ಲಾಧ್ಯಕ್ಷ ಎಲ್.ಗಿರೀಶ್ ಲಕ್ಷ್ಮೀನಾರಾಯಣ್ ತಿಳಿಸಿದರು.
ರೈತಸಭಾಂಗಣದಲ್ಲಿ ಅಂದು ಬೆಳಗ್ಗೆ 10.30ಕ್ಕೆ ಹಸ್ತಮುದ್ರ ತಜ್ಞ ಡಾ.ಲಕ್ಷ್ಮೀ ಶ್ರೀನಿವಾಸ್ ಗುರೂಜಿ ಅವರ ಸಾನಿಧ್ಯದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್ ಸಮಾರಂಭ ಉದ್ಘಾಟಿಸಲಿದ್ದಾರೆ. ಕನ್ನಡ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಎಸ್.ಬಾಲಾಜಿ ಅಧ್ಯಕ್ಷತೆ ವಹಿಸಲಿದ್ದು, ದಕ್ಷಿಣ ಭಾರತ ಬಲಿಜ ಒಕ್ಕೂಟದ ಸಂಚಾಲಕ ದಾಸರಿ ರಾಮು ಉಪಸ್ಥಿತರಿದ್ದು, ಬಲಿಜ ವಾರ್ತೆ ಪತ್ರಿಕೆ ಸಂಪಾದಕ ಡಾ.ಕೆ.ಎನ್.ವಿಜಯ್‌ಕೊಪ್ಪ ಪ್ರಾಸ್ತಾವಿಕ ನುಡಿಯಾಡಲಿದ್ದಾರೆಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ವುುಖ್ಯ ಅತಿಥಿಗಳಾಗಿ ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಆರ್.ಪ್ರಮೀಳ ನಾಯ್ಡು, ಬಿಬಿಎಂಪಿಯ ಮಾಜಿ ಮಹಾಪೌರ ಜಿ.ಪದ್ಮಾವತಿ, ಬಳ್ಳಾರಿಯ ಹೋರಾಟಗಾರ ಟಪಾಲ್ ಗಣೇಶ್, ರಾಜ್ಯ ಕೃಷ್ಣದೇವರಾಯ ಬಲಿಜ ಸಂಘದ ಸಂಚಾಲಕ ಡಾ.ಶಿರಾ ಗೋವಿಂದಪ್ಪ, ದರ್ಮದರ್ಶಿ ಲಯನ್ ಡಾ.ಬಿ.ಎಂ.ರವಿನಾಯ್ಡು ಪಾಲ್ಗೊಳ್ಳಲಿದ್ದಾರೆ. ಈ ವೇಳೆ ಯೋಗಿನಾರಾಯಣ ರಾಜ್ಯ ಪ್ರಶಸ್ತಿ ಹಾಗೂ ಸಮುದಾಯದ ಗಣ್ಯರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಡಾ.ಎಸ್.ಬಾಲಾಜಿ, ಡಾ.ಕೆ.ಎನ್.ವಿಜಯ್‌ಕೊಪ್ಪ, ಕೀಲಾರ ಮಧು ಇದ್ದರು.