

ಕುಶಾಲನಗರ:
ಕುಶಾಲನಗರ ತಾಲೂಕು ಶ್ರೀ ಯೋಗಿ ನಾರೇಯಣ ಬಲಿಜ ಸಂಘದ ವತಿಯಿಂದ ಭಾನುವಾರ ಬಲಿಜ ಕುಲಗುರು ಶ್ರೀ ಕೈವಾರ ತಾತಯ್ಯನವರ ಜಯಂತ್ಯುತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಯೋಗಿ ನಾರೇಯಣ ಶ್ರೀಗಳ ಭಾವಚಿತ್ರವನ್ನು ಅಲಂಕೃತ ವಾಹನದಲ್ಲಿ ಇಟ್ಟು ಬೈಲಕುಪ್ಪೆ ಮುಖ್ಯ ರಸ್ತೆ ಮತ್ತು ಕುಶಾಲನಗರ ಗಣಪತಿ ದೇವಾಲಯದಿಂದ ರಥಬೀದಿಯ ಮೂಲಕ ಗಾಯತ್ರಿ ಕಲ್ಯಾಣ ಮಂಟಪದವರೆಗೆ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭ ಮಾಲ್ದಾರೆಯ ಮುತ್ತಪ್ಪ ಚೆಂಡ ಮೇಳಂ ತಂಡದವರಿAದ ಆಕರ್ಷಕವಾದ ಚಂಡೆ ನೋಡುಗ ಭಕ್ತರ ಗಮನಸೆಳೆಯಿತು. ಮೆರವಣಿಗೆಯಲ್ಲಿ ಕುಶಾಲನಗರ, ಬೈಲಕುಪ್ಪೆ ಆಸುಪಾಸುಗಳ ಗ್ರಾಮಗಳ ನೂರಾರು ಸಂಖ್ಯೆಯ ಬಲಿಜ ಸಮಾಜದವರು ಭಾಗವಹಿಸಿ ಗಮನಸೆಳೆದರು.
ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಾದ ಶನಿವಾರಸಂತೆ ಗ್ರಾಪಂ ಅಧ್ಯಕ್ಷೆ ಗೀತಾ ಹರೀಶ್, ಬೈಲಕುಪ್ಪೆ ಗ್ರಾ.ಪಂ. ಅಧ್ಯಕ್ಷ ರಘು, ಉಪಾಧ್ಯಕ್ಷೆ ಗೀತಾ ಸುಬ್ರಹ್ಮಣ್ಯ, ಸದಸ್ಯ ಬಾಲಾಜಿ ರಘು, ಭುವನಹಳ್ಳಿ ಗ್ರಾಪಂ ಅಧ್ಯಕ್ಷ ಜೋಗನಹಳ್ಳಿ ದೇವರಾಜು, ಬಾಳೆಲೆಯ ಪ್ರಾಂಶುಪಾಲೆ ಗೀತಾ ನಾಯ್ಡು, ಕೊಪ್ಪ ಸಹಕಾರ ಸಂಘದ ನಿರ್ದೇಶಕ ಸುಬ್ರಹ್ಮಣ್ಯ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ತಾಲೂಕು ಬಲಿಜ ಸಂಘದ ಅಧ್ಯಕ್ಷ ಆರ್. ಬಾಬಣ್ಣ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮೈಸೂರು ಮಹಾರಾಜ ಕಾಲೇಜಿನ ಉಪನ್ಯಾಸಕ ಡಾ.ಎಸ್. ಕಿತ್ತೂರು ಕೃಷ್ಣಪ್ಪ, ಖ್ಯಾತ ಅಂಕಣಕಾರ ಡಾ. ಗುಬ್ಬಿಗೂಡು ರಮೇಶ್, ಕೊಡಗು ಜಿಲ್ಲಾ ಬಲಿಜ ಸಂಘದ ಅಧ್ಯಕ್ಷರಾದ ಟಿ.ಡಿ. ಸುಬ್ರಮಣಿ, ಮಡಿಕೇರಿ ತಾಲೂಕು ಅಧ್ಯಕ್ಷೆ ಮೀನಾಕ್ಷಿ ಕೇಶವ, ಪ್ರಮುಖರಾದ ಎಂ.ಆರ್. ಗಣೇಶ್, ಎನ್.ಸ್ವಾಮಿ, ಟಿ.ಎಸ್. ಬಾಲಕೃಷ್ಣ, ಟಿ.ಡಿ. ದಯಾನಂದ, ಟಿ.ಎಸ್.ನಿರಂಜನ್, ಟಿ.ಬಿ.ಸತೀಶ್, ಆರ್.ಸೋಮಶೇಖರ್, ಎಸ್. ಮದನ್ ಮತ್ತಿತರರು ಇದ್ದರು.