

ಸುಬ್ರಹ್ಮಣ್ಯ: ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲದಲ್ಲಿ ದೀಪಾವಳಿ ಸಂಪ್ರದಾಯ ಪ್ರಕಾರ ಆಚರಿಸಲಾಯಿತು. ಶ್ರೀ ದೇವರಿಗೆ ವಿಶೇಷ ಪೂಜೆ ಹಾಗೂ ಶನಿವಾರ ಕಾರ್ತಿಕ ಪೂಜೆ, ತುಳಸಿ ಪೂಜೆ, ಬಲಿಯೇಂದ್ರ ಪೂಜೆ ಹಾಗೂ ಗೋಪೂಜೆ ನಡೆಯಿತು.
ಶನಿವಾರ ಗೋವುಗಳಿಗೆ ಗೋಗ್ರಾಸ ನೀಡಿ ಗೋಪೂಜೆ ನೆರವೇರಿಸಲಾಯಿತು. ಬಳಿಕ ತುಳಸಿ ಪೂಜೆ ಮತ್ತು ಕಾರ್ತಿಕ ಪೂಜೆ ಸಂಪನ್ನವಾಯಿತು. ಶ್ರೀ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ ನೆರವೇರಿತು. ಈ ಸಂದರ್ಭ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತೂರ್ ಹಾಗೂ ಊರಭಕ್ತರು ಉಪಸ್ಥಿತರಿದ್ದರು.