ನವನಗರದಲ್ಲಿ ಬಲಿದಾನ ದಿನಾಚರಣೆ

New Balidana New
Published on

ಹುಬ್ಬಳ್ಳಿ : ಸ್ವಾತಂತ್ರ್ಯ ಹೋರಾಟಗಾರರಾದ ಭಗತ್​ ಸಿಂಗ್​,ಸುಖದೇವ್​ ಹಾಗೂ ರಾಜಗುರು ಇವರ ಬಲಿದಾನ ದಿನದ ಅಂಗವಾಗಿ ವಿಶ್ವ ಹಿಂದು ಪರಿಷತ್​, ಬಜರಂಗದಳ ವತಿಯಿಂದ ನವನಗರದ ಮುಖ್ಯ ಬೀದಿಗಳಲ್ಲಿ ಬೃಹತ್​ ಪಂಜಿನ ಮೆರವಣಿಗೆ ನಡೆಸಲಾಯಿತು.

ಕುಂದಗೋಳದ ಕಲ್ಯಾಣಪುರ ಮಠದ ಶ್ರೀ ಅಭಿನವ ಬಸವಣ್ಣ ಅಜ್ಜನವರು ಸಾನ್ನಿಧ್ಯ ವಹಿಸಿದ್ದರು. ಜಯತೀರ್ಥ ಕಟ್ಟಿ ಮುಖ್ಯ ವಕ್ತಾರರಾಗಿ ಪಾಲ್ಗೊ ಂಡಿದ್ದರು.

ನಿವೃತ್ತ ಯೋಧರಾದ ಗಿರಿ ಮಲ್ಲಪ್ಪ, ನೀಲಪ್ಪ ಗೊರವಿ ಅತಿಥಿಗಳಾಗಿದ್ದರು. ರಘು ಯಲ್ಲಕ್ಕನವರ, ಗೋರಕ್ಷಾ ಪ್ರಮುಖರಾದ ವಿಜಯ ರಸಾಗರ, ಮಹಾನಗರ ಬಜರಂಗದಳ ಸಂಯೋಜಕ ಗಂಗಾಧರ ಸಂಗಮಶೆಟ್ಟರ, ಮಹಾನಗರ ಮಾತೃ ಶಕ್ತಿ ಪ್ರಮುಖರಾದ ವಿಣಾ, ವಿಶ್ವ ಹಿಂದು ಪರಿಷತ್ತಿನ ಸಚಿನ ಪಾಟೀಲ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net