ಬಾಳೆಕುದ್ರು ಶ್ರೀ ಸೀಮೋಲ್ಲಂಘನ

seemolanghana
ಬಾಳೆಕುದ್ರು ಶ್ರೀ ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಬೆಂಗಳೂರಲ್ಲಿ ಚಾತುರ್ಮಾಸ್ಯ ವ್ರತ ಮುಗಿಸಿ ಉಡುಪಿ ಜಿಲ್ಲೆಯ ಹಂಗಾರಕಟ್ಟೆ ಬಾಳೆಕುದ್ರು ಮಠದಲ್ಲಿ ಶುಕ್ರವಾರ ಸಿಮೋಲ್ಲಂಘನ ಕಾರ್ಯಕ್ರಮ ನಡೆಸಿದರು.
Published on

ಕೋಟ: ಬಾಳೆಕುದ್ರು ಶ್ರೀ ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಬೆಂಗಳೂರಲ್ಲಿ ಚಾತುರ್ಮಾಸ್ಯ ವ್ರತ ಮುಗಿಸಿ ಉಡುಪಿ ಜಿಲ್ಲೆಯ ಹಂಗಾರಕಟ್ಟೆ ಬಾಳೆಕುದ್ರು ಮಠದಲ್ಲಿ ಶುಕ್ರವಾರ ಸೀಮೋಲ್ಲಂಘನ ಕಾರ್ಯಕ್ರಮ ನಡೆಸಿದರು.

ಧಾರ್ಮಿಕ ಕಾರ್ಯಕ್ರಮವನ್ನು ತೀರ್ಥಬೈಲ್ ರಾಮಕೃಷ್ಣ ಅಡಿಗಳು ನಡೆಸಿಕೊಟ್ಟರು. ಶ್ರೀ ದುರ್ಗಾ ಭಜನಾ ಮಂಡಳಿ ಬಾಳ್ಕುದ್ರು ಮಹಿಳಾ ಸದಸ್ಯರಿಂದ ಭಜನಾ ಸಂಕೀರ್ತನಾ ಕಾರ್ಯಕ್ರಮ ಸಂಪನ್ನವಾಯಿತು.

ಜ್ಞಾನಾಕ್ಷಿ ರಾಜರಾಜೇಶ್ವರಿ ದೇವಸ್ಥಾನ ಕೈಲಾಸ ಆಶ್ರಮ ಬೆಂಗಳೂರು ಪರವಾಗಿ ಅಲ್ಲಿನ ವೇಣುಗೋಪಾಲ್ ರಾವ್ ಪುತ್ತೂರು, ಸಂಗೀತ ವೇಣುಗೋಪಾಲ ಮತ್ತು ಕೈಲಾಸ್ ಆಶ್ರಮದ ವೇದ ವಿದ್ವಾನ್ ಆಕಾಶ ವಿಶ್ವಾಮಿತ್ರ, ಉಡುಪಿಯ ಶಂಭು ಶೆಟ್ಟಿ,ಬಾಳ್ಕುದ್ರ ಡಾ.ಕೆ.ಪಿ.ಶೆಟ್ಟಿ, ಶ್ರೀ ಮಠದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜಶೇಖರ ಕಲ್ಕೂರ, ಸದಸ್ಯ ಪಾಮರ ಚಡಗ, ಶ್ರೀ ಮಠದ ವ್ಯವಸ್ಥಾಪಕ ಉಪಸ್ಥಿತರಿದ್ದರು. ಸ್ವಾಮೀಜಿಯವರ ಆರೋಗ್ಯ ಸಮಸ್ಯೆ ಬಗ್ಗೆ ಹಾಗೂ ಅವರ ಚಿಕಿತ್ಸೆ ಬಗ್ಗೆ ಅಲ್ಲದೆ ನವರಾತ್ರಿ ಮಹೋತ್ಸವದ ಕುರಿತು ಮತ್ತು ಮುಂದಿನ ವ್ಯವಸ್ಥೆ ಬಗ್ಗೆ ಚರ್ಚಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net