ವೈಶಿಷ್ಟ್ಯತೆಯ ಸಂಸ್ಕೃತಿಯ ದೇಶ: ಶ್ರೀ ನೃಸಿಂಹಾಶ್ರಮ ಸ್ವಾಮೀಜಿ

balekudru new
Published on

ಕೋಟ: ಭಾರತೀಯ ದೃಷ್ಟಿಕೋನದಲ್ಲಿ ನಮ್ಮ ಸಂಸ್ಕೃತಿ ಹಲವಾರು ವೈಶಿಷ್ಟ್ಯತೆಗಳನ್ನು ಹೊಂದಿದೆ. ಆದ್ದರಿಂದ ಇದನ್ನು ಕರ್ಮಭೂಮಿ ಎಂದು ಹೇಳಲಾಗಿದೆ ಎಂದು ಹಂಗಾರಕಟ್ಟೆ ಬಾಳ್ಕುದ್ರು ಶ್ರೀಮಠದ ನೃಸಿಂಹಾಶ್ರಮ ಸ್ವಾಮೀಜಿ ಹೇಳಿದರು.

ಬ್ರಹ್ಮಾವರ ತಾಲೂಕಿನ ಹಂಗಾರಕಟ್ಟೆ ಬಾಳ್ಕುದ್ರು ಮಠ ಮತ್ತು ವಿಶ್ವ ಗಾಯತ್ರಿ ಪರಿವಾರದ ಆಶ್ರಯದಲ್ಲಿ ಭಾನುವಾರ ಆಯೋಜಿಸಲಾದ ಭಾರತೀಯ ಸಂಸ್ಕಾರ ಶಿಕ್ಷಣ ಆಧಾರಿತ ಜನ್ಮ ದಿನಾಚರಣೆ ಮಾಹಿತಿ ಶಿಬಿರ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.

ರಾಮಾಯಣ ಮಹಾಭಾರತ ನಮಗೆ ಸಂಸ್ಕೃತಿ ಹಾಗೂ ಉತ್ತಮ ಸಂಸ್ಕಾರ ನೀಡಿದೆ. ಇಲ್ಲಿಯ ಋಷಿ ಪರಂಪರೆ ಉನ್ನತವಾಗಿರುವುದರಿಂದ ಪಾಶ್ಚಾತ್ಯರು ನಮ್ಮ ಸಂಸ್ಕೃತಿಯತ್ತ ಚಿತ್ತೈಸಿದ್ದಾರೆ ಎಂದರು.

ಮಠದ ಆಡಳಿತ ಮಂಡಳಿ ಅಧ್ಯಕ್ಷ ಶಂಭು ಶೆಟ್ಟಿ, ಭಾಸ್ಕರ್ ಭಟ್, ಉದ್ಯಮಿ ಗುಜ್ಜಾಡಿ ಪ್ರಭಾಕರ ನಾಯಕ್, ವಿಶ್ವ ಗಾಯತ್ರಿ ಪರಿವಾರದ ಜಯಲಕ್ಷ್ಮಿ, ಕೆ.ಪಿ.ಸುರೇಶ್ ಭಟ್, ವಕೀಲ ಶ್ರೀನಿವಾಸ ನಾಯಕ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಯೋಜಕ ಮಂಜುನಾಥ ಭಟ್ ಸ್ವಾಗತಿಸಿದರು. ರಾಘವೇಂದ್ರ ವಂದಿಸಿದರು. ರಾಘವೇಂದ್ರ ಮಠದ ಬೆಟ್ಟು ನಿರೂಪಿಸಿದರು. ಇದೇ ಸಂದರ್ಭ ಚೇರ್ಕಾಡಿ ಸೂರೆಬೆಟ್ಟಿನ ಸಿದ್ಧಿ ವಿನಾಯಕ ಭಜನಾ ಮಂಡಳಿ ತಂಡದವರಿಂದ ಕುಣಿತ ಭಜನೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net