ಬಾಲೇಖಾನ್ ಸಹ ಕಲಾವಿದ, ಜೀವಮಾನ ಸಾಧನೆ ಪ್ರಶಸ್ತಿ

7 Dwd 4C
Published on

ಧಾರವಾಡ: ಸಿತಾರ ನವಾಜ ಉಸ್ತಾದ್ ಬಾಲೇಖಾನ್ ಸ್ಮರಣಾರ್ಥ ಕೊಡಮಾಡುವ `ಬಾಲೇಖಾನ್ ಸಹ ಕಲಾವಿದ' ಪ್ರಶಸ್ತಿಯನ್ನು ಮುಂಬೈನ ಖ್ಯಾತ ತಬಲಾ ಕಲಾವಿದ ಪಂ. ಕಾಲೀನಾಥ ಮಿಶ್ರಾ ಅವರಿಗೆ ನಗರದ ಸೃಜನಾ ರಂಗಮ0ದಿರದಲ್ಲಿ ಶನಿವಾರ ಪ್ರದಾನ ಮಾಡಲಾಯಿತು. ಇದೇವೇಳೆ ಸಾಂಸ್ಕೃತಿಕ ಲೋಕದಲ್ಲಿ ಅಪಾರ ಸೇವೆ ಸಲ್ಲಿಸಿದ ಸಿತಾರ ರತ್ನ ಸಮಿತಿ ಅಧ್ಯಕ್ಷ ರಾಘವೇಂದ್ರ ಆಯಿ ಅವರಿಗೆ `ಜೀವಮಾನ ಸಾಧನೆ' ಪ್ರಶಸ್ತಿ ಪ್ರದಾನ ಮಾಡಲಾಯಿತು. ಇಬ್ಬರೂ ಸಾಧಕರಿಗೆ ತಲಾ 25,000 ರೂಪಾಯಿ ನಗದು ಹಾಗೂ ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಯಿತು.

ಹಿರೇಮಲ್ಲೂರ ಈಶ್ವರನ್ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಶಶಿಧರ ತೋಡ್ಕರ, ಹಫೀಜ್ ಖಾನ್, ಮೊಹಸಿನ್ ಖಾನ್, ರಯೀಸ್ ಖಾನ್, ಉಸ್ಮಾನ್ ಖಾನ್, ಛೋಟೆ ರಹಿಮತ್ ಖಾನ್, ಶಫೀಕ್ ಖಾನ್, ರಫೀಕ್ ಖಾನ್, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net