

ಧಾರವಾಡ: ಉಸ್ತಾದ್ ಬಾಲೇಖಾನ್ ಅವರ 19ನೇ ಪುಣ್ಯತಿಥಿ ಅಂಗವಾಗಿ ಬೆಂಗಳೂರಿನ ಸಿತಾರ ನವಾಜ್ ಉಸ್ತಾದ್ ಬಾಲೇಖಾನ್ ಸ್ಮರಣಾರ್ಥ ಸಂಸ್ಥೆಯು ಅವರ ಹೆಸರಿನಲ್ಲಿ ನೀಡುವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಗರದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಡಿ. 2ರಂದು ಸಂಜೆ 5.30ಕ್ಕೆ ಆಯೋಜಿಸಲಾಗಿದೆ.
2023ರ ಇನ್ಫೋಸಿಸ್ ಸಿತಾರ ನವಾಜ್ ಉಸ್ತಾದ್ ಬಾಲೇಖಾನ್ ಸ್ಮತಿ ಪ್ರಶಸ್ತಿಗೆ ಧಾರವಾಡದ ಖ್ಯಾತ ವಯೋಲಿನ್ ವಾದಕರಾದ ಪಂ. ಬಿ.ಎಸ್. ಮಠ ಹಾಗೂ ವಿದುಷಿ ಅಕ್ಕಮಹಾದೇವಿ ಮಠ ದಂಪತಿ ಆಯ್ಕೆಯಾಗಿದ್ದಾರೆ. ಸಹ ಕಲಾವಿದ ಪ್ರಶಸ್ತಿಯನ್ನು ಮುಂಬೈನ ಖ್ಯಾತ ತಬಲಾ ವಾದಕ ಪಂ. ಓಂಕಾರ ಗುಲ್ವಾಡಿ ಅವರಿಗೆ ಪ್ರದಾನ ಮಾಡಲಾಗುವುದು. ಸಂಗೀತ ಕಲಿಯುತ್ತಿರುವ ಇಬ್ಬರು ವಿದ್ಯಾರ್ಥಿಗಳಿಗೆ ಸೌಭಾಗ್ಯಲಕ್ಷ್ಮೀ ವಸಂತರಾವ ಜಾಜಿ ಶಿಷ್ಯವೇತನ ಹಾಗೂ ಸತೀಶ ಹಂಪಿಹೊಳಿ ಮ್ಯುಸಿಕ್ ೌಂಡೇಶನ್ ಶಿಷ್ಯವೇತನವನ್ನು ಇದೇವೇಳೆ ನೀಡಲಾಗುವುದು.
ಖ್ಯಾತ ಮನೋರೋಗ ತಜ್ಞ ಡಾ. ಆನಂದ ಪಾಂಡುರಂಗಿ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ಸಿತಾರ ರತ್ನ ಸಮಿತಿಯ ಅಧ್ಯಕ್ಷ ರಾಘವೇಂದ್ರ ಆಯಿ ಅಧ್ಯಕ್ಷತೆ ವಹಿಸುವರು. ಉಸ್ತಾದ್ ಬಾಲೇಖಾನ ೌಂಡೇಶನ್ ಟ್ರಸ್ಟ್ ಅಧ್ಯಕ್ಷ ಹಫೀಜ್‌ಖಾನ್ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.