

ತುಳುವಿನ ಓದು ಅಂದರೆ ಅದು ತುಳು ಬದುಕಿನ ಓದು. ಈ ಓದು ನಮ್ಮಲ್ಲಿ ಜ್ಞಾನ, ಕುತೂಹಲದ ಬಗ್ಗೆ ಪ್ರಶ್ನೆ ಮೂಡಿಸುವುದು. ತುಳುವಿಗೆ ಒಂದು ತಾಕತ್ತು, ತಮೇರಿ ನೀಡುವ ಸಲುವಾಗಿ ಬರೆಯುವ ಹಾಗೂ ಓದುವ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯಬೇಕಾಗಿದೆ ಎಂದು ಎಂದು ತುಳು ವಿದ್ವಾಂಸ ಪ್ರೊ.ಬಿ.ಶಿವರಾಮ ಶೆಟ್ಟಿ ಹೇಳಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಮಂಗಳೂರು ತುಳು ಭವನದಲ್ಲಿ ಶುಕ್ರವಾರ ಆಯೋಜಿಸಿದ ‘ಅಕಾಡೆಮಿಡ್ ಒಂಜಿದಿನ: ಬಲೆ ತುಳು ಓದುಗ’ ಅಭಿಯಾನದ ಉದ್ಘಾಟನೆ ನೇರವೇರಿಸಿ ದಿಕ್ಸೂಚಿ ಭಾಷಣ ಮಾಡಿದರು. ತುಳುವಿನ ಬದುಕೆಂದರೆ ಅದು ಪ್ರಕೃತಿಗೆ ಗೌರವ, ನಿಸರ್ಗ ಮೌಲ್ಯಕ್ಕೆ ಆದ್ಯತೆ ಹಾಗೂ ಮನ್ನಣೆ ನೀಡುವ ಪರಂಪರೆ. ತುಳು ಎಲ್ಲರನ್ನೂ ಒಳಗೊಳ್ಳವ ಹಾಗೂ ಎಲ್ಲರನ್ನೂ ಕರೆಸಿಕೊಳ್ಳುವ ವಿಶಾಲ ಮನೋಭಾವವನ್ನು ಹೊಂದಿದೆ. ನಿಸರ್ಗದತ್ತವಾಗಿ ತುಳುವಿನ ಬಣ್ಣ ಕೆಂಪು ಮತ್ತು ಬಿಳಿ, ಅದು ಸೂರ್ಯನ ಕೆಂಪು, ಈ ಕಾರಣಕ್ಕಾಗಿ ಸೂರ್ಯ ಚಂದ್ರರ ಉಲ್ಲೇಖ ಇರುವಂತಹದು. ಈ ಬಣ್ಣಗಳು ತುಳುವಿನ ನೈಜ ಆಸ್ಮಿತೆ ಕೂಡ ಆಗಿದೆ. ಇದು ಬದಲಾಗದಂತೆ ನೋಡಿಕೊಳ್ಳವ ಜವಬ್ದಾರಿ ನಮ್ಮೆಲ್ಲರ ಮೇಲಿದೆ. ತುಳುವಿನ ಜ್ಞಾನ ಪರಂಪರೆ ಹೊಸ ತಲೆಮಾರಿಗೆ ವರ್ಗಾವಣೆಯಾಗಬೇಕಿದ್ದರೆ ತುಳುವಿನ ಓದು ಅಗತ್ಯ ಎಂದರು. ಅಭಿಯಾನದ ಮೊದಲ ಕಾರ್ಯಕ್ರಮದಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ತುಳು ಅಧ್ಯಯನ ಕೇಂದ್ರದ 38 ವಿದ್ಯಾರ್ಥಿಗಳು ಪಾಲ್ಗೊಂಡರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಕುಂಬ್ರ ದುರ್ಗಾ ಪ್ರಸಾದ್ ರೈ, ನಿವೃತ್ತ ಪತ್ರಗಾರ ಸಹಾಯಕ ಬೆನೆಟ್ ಅಮ್ಮನ್ನ, ಆಳ್ವಾಸ್ ತುಳು ಅಧ್ಯಯನ ಕೇಂದ್ರದ ಸಂಯೋಜಕ ಡಾ.ಯೋಗೀಶ್ ಕೈಕೋಡಿ ಶುಭಕೋರಿದರು. ತುಳು ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿದರು. ತುಳು ಅಕಾಡೆಮಿ ಸದಸ್ಯ ಸಂತೋಷ್ ಶೆಟ್ಟಿ ವಂದಿಸಿದರು. -----ಕೋಟ್ಸ್------ ತುಳು ಭಾಷೆ, ಸಂಸ್ಕೃತಿ ಬಗ್ಗೆ ಅಗಾಧವಾದ ಪುಸ್ತಕ ಭಂಡಾರವು ಅಕಾಡೆಮಿಯ ಗ್ರಂಥಾಲಯದಲ್ಲಿದೆ. ವಿದ್ಯಾರ್ಥಿ ಯುವ ಜನರಲ್ಲಿ ತುಳು ಓದಿನ ಅಭಿರುಚಿ ಮೂಡಿಸುವ ಹಿನ್ನೆಲೆಯಲ್ಲಿ ಅಕಾಡೆಮಿಯ ಬಲೆ ತುಳು ಓದುಗ ಅಭಿಯಾನ ಹಮ್ಮಿಕೊಂಡಿದೆ. ತಾರಾನಾಥ್ ಗಟ್ಟಿ ಕಾಪಿಕಾಡ್, ಅಧ್ಯಕ್ಷರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ------ಫೋಟೋ------ ಎಂಎನ್‌ಜಿ- ಓಸಿಟಿ 25- ತುಳು ಭವನ ಮಂಗಳೂರು ತುಳು ಭವನದಲ್ಲಿ ಶುಕ್ರವಾರ ಆಯೋಜಿಸಲಾದ ‘ಅಕಾಡೆಮಿಡ್ ಒಂಜಿದಿನ: ಬಲೆ ತುಳು ಓದುಗ’ ಅಭಿಯಾನ ಕಾರ್ಯಕ್ರಮವನ್ನು ತುಳು ವಿದ್ವಾಂಸ ಪ್ರೊ.ಬಿ.ಶಿವರಾಮ ಶೆಟ್ಟಿ ಉದ್ಘಾಟಿಸಿದರು. ಅಕಾಡೆಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ, ನಿವೃತ್ತ ಪತ್ರಗಾರ ಸಹಾಯಕ ಬೆನೆಟ್ ಅಮ್ಮನ್ನ, ಆಳ್ವಾಸ್ ತುಳು ಅಧ್ಯಯನ ಕೇಂದ್ರದ ಸಂಯೋಜಕ ಡಾ.ಯೋಗೀಶ್ ಕೈಕೋಡಿ, ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ ಮುಂತಾದವರು ಉಪಸ್ಥಿತರಿದ್ದರು.