ಆ.೧೪ರಂದು ಬೇಲ್‌ನಮ್ಮೆ ಕಾರ್ಯಕ್ರಮ

bel namme
Published on

ಮಡಿಕೇರಿ: ವಿರಾಜಪೇಟೆ ತಾಲೂಕಿನ, ಬೊಳ್ಳುಮಾಡು ಗ್ರಾಮದ ಮಾತಂಡ ಶಕು ಅಕ್ಕಮ್ಮ ಹಾಗೂ ಮನು ಇವರ ಗದ್ದೆಯಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಬೇಲ್ ನಮ್ಮೆ(ಪೈಪೋಟಿ) ಕಾರ್ಯಕ್ರಮ ಆ.೧೪ರಂದು ನಡೆಯಲಿದೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ, ರಾಜ್ಯ ಕೃಷಿ ಸಚಿವ ಚೆಲುವರಾಯಸ್ವಾಮಿ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ಶಾಸಕ ಎ.ಎಸ್.ಪೊನ್ನಣ್ಣ, ಶಾಸಕ ಡಾ.ಮಂತರ್ ಗೌಡ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಕೃಷಿ ನಿರ್ದೇಶಕ ಡಾ.ಸೋಮಶೇಖರ್, ವಿರಾಜಪೇಟೆ ತಹಸೀಲ್ದಾರ್ ಎಚ್.ಎನ್.ರಾಮಚಂದ್ರ, ಕಾಕೋಟು ಪರಂಬು ಗ್ರಾ.ಪಂ.ಅಧ್ಯಕ್ಷರಾದ ಬಟ್ಟಕಾಳಂಡ ಕಾಮುಣಿ ಸುರೇಶ್, ಬೊಳ್ಳುಮಾಡು ಮಹಿಳಾ ಕೃಷಿಕರಾದ ಮಾತಂಡ ಶಕುಅಕ್ಕಮ್ಮ ಇತರರು ಪಾಲ್ಗೊಳ್ಳಲಿದ್ದಾರೆ.


ಕೊಡಗು ವಿಜ್ಞಾನ ವೇದಿಕೆಯಧ್ಯಕ್ಷರಾದ ನಿ.ಡೀನ್ ಡಾ.ಚೆಪ್ಪುಡಿರ ಜಿ.ಕುಶಾಲಪ್ಪನವರು ಬೇಲ್‌ಪಣಿಯ ಕಷ್ಟ-ಸುಖ-ಪರಿಹಾರ ಎಂಬ ವಿಷಯದ ಬಗ್ಗೆ ವಿಚಾರ ಮಂಡನೆಯನ್ನು ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ(ನಾಟಿ ಓಟ-ಪುರುಷರಿಗೆ, ಮಹಿಳೆಯರಿಗೆ, ಬಾಲಕರಿಗೆ ಮತ್ತು ಬಾಲಕಿಯರಿಗೆ ಹೈಸ್ಕೂಲ್‌ನಿಂದ ೨ನೇ ಪಿಯುಸಿ ತನಕ ಎಲ್ಲಾ ವಿಭಾಗದಲ್ಲಿ ೧, ೨ ಮತ್ತು ೩ ನೇ ಬಹುಮಾನ ಇರುತ್ತದೆ. ನಾಟಿ ಓಟದ ೪ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದವರಿಗೆ ನಗದು ಹಣದ ಜತೆಗೆ ಕೋರಿಕೊಡೆ ಕೊಡಲಾಗುವುದು. ಹಗ್ಗ ಜಗ್ಗಾಟದಲ್ಲಿ (ಪುರುಷರು ಹಾಗೂ ಮಹಿಳೆಯರಿಗೆ) ೧ ಮತ್ತು ೨ನೇ ಬಹುಮಾನ ನೀಡಲಾಗುತ್ತದೆ.


ಮಧ್ಯಾಹ್ನ ೨ ಗಂಟೆಯ ನಂತರ ನಡೆಯುವ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಕರ್ನಾಟಕ ವಿಧಾನ ಪರಿಷತ್ ಶಾಸಕ ಮಂಡೇಪಂಡ ಸುಜಾ ಕುಶಾಲಪ್ಪ, ಸರ್ಕಾರಿ ಅನುಷ್ಠಾನ ಗ್ಯಾರಂಟಿ ಸಮಿತಿಯ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಬೊಳ್ಳುಮಾಡು ವಿ.ಎಸ್.ಎಸ್.ಎನ್ ಅಧ್ಯಕ್ಷ ಮಾತಂಡ ಬೇಬಿ ಪೂವಯ್ಯ, ಬೊಳ್ಳುಮಾಡು ಗ್ರಾಮ ಪಂಚಾಯಿತಿಯ ಸದಸ್ಯ ಕುಯ್ಮಂಡ ಸಂಜು ಕಾಳಯ್ಯ ಹಾಗೂ ಅಕಾಡೆಮಿಯ ಎಲ್ಲಾ ಸದಸ್ಯರುಗಳು ಭಾಗವಹಿಸಲಿದ್ದಾರೆ. ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net