ಒಂದೇ ಬಾಳೆ ಗಿಡದಲ್ಲಿ ಎರಡು ವಿಧದ ಬಾಳೆ ಕಾಯಿ

IMG-20230826-WA0010
Published on

ಕಡಬ: ಒಂದು ಬಾಳೆ ಗಿಡದಲ್ಲಿ ಎರಡು ವಿಧದ ಬಾಳೆ ಕಾಯಿ ಬಿಟ್ಟಿರುವ ವಿಶೇಷ ಘಟನರ ಕಡಬ ತಾಲೂಕಿನ ಮೀನಾಡಿಯಲ್ಲಿ ಕಂಡುಬಂದಿದೆ.

ಮೀನಾಡಿ ದರ್ಖಾಸು ಶೀನಪ್ಪ ಗೌಡರ ಮನೆಯಲ್ಲಿ ಈ ವಿಶೇಷ ಬಾಳೆಗೊನೆ ಬಿಟ್ಟಿದೆ. ಅವರು ಚಂದ್ರ ಬಾಳೆ ಗಿಡ ನೆಟ್ಟಿದ್ದು, ಇದೀಗ ಅದು ಗೊನೆ ಹಾಕಿದ್ದು ಈ ಗೊನೆಯಲ್ಲಿ ಎರಡು ವಿಧದ ಬಾಳೆ ಗೊನೆ ಕಂಡುಬಂದಿದೆ. ಇದರಲ್ಲಿ ಅರ್ಧ ಭಾಗ ಚಂದ್ರ ಬಾಳೆ ಗೊನೆ ಹಾಗೂ ಇನ್ನರ್ಧ ಕದಳಿ ಬಾಳೆ ಕಾಯಿ ಹೊರಬಂದಿದೆ. ಪ್ರಕೃತಿ ವಿಸ್ಮಯಕ್ಕೆ ಸಾಕ್ಷಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net