

ಚನ್ನಮ್ಮನ ಕಿತ್ತೂರು: ಬೆಳಗಾವಿ ಸಾರಿಗೆ ಬಸ್ ಕಂಡಕ್ಟರ್ ವಿರುದ್ಧ ಹಾಕಿರುವ ಪೋಕ್ಸೋ ಕೇಸ್ ಕೂಡಲೇ ಹಿಂಪಡೆಯುವಂತೆ ಕರ್ನಾಟಕ ರಣಾ ವೇದಿಕೆ ಕಾರ್ಯಕರ್ತರು ಭಾನುವಾರ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ ಕಿತ್ತೂರು ರಾಣಿ ಚನ್ನಮ್ಮ ವತ್ತದಲ್ಲಿ ಪ್ರತಿಭಟನೆ ನಡೆಸಿದರು.
ವೇದಿಕೆ ತಾಲೂಕಾಧ್ಯ ರುದ್ರಗೌಡ ಪಾಟೀಲ ಮಾತನಾಡಿ, ಮಧ್ಯರಾತ್ರಿ 50 ವಯಸ್ಸಿನ ಕಂಡಕ್ಟರ್ ಮೇಲೆ ಪೋಕ್ಸೋ ಕೇಸ್ ದಾಖಲು ಮಾಡಿದ್ದು, ಉದ್ದೇಶಪೂರ್ವಕವಾಗಿ ಯಾವುದೋ ಕಾಣದ ಕೆಗಳ ಕೈವಾಡವಿದೆ. ಸಣ್ಣ ವಯಸ್ಸಿನ ಹೆಣ್ಣುಮಗಳನ್ನು ಮುಂದೆ ಬಿಟ್ಟು ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ. ಇದನ್ನು ಕರವೇ ಖಂಡಿಸುತ್ತದೆ ಎಂದರು.
ಮುಖಂಡ ಕಿರಣ ವಾಳದ ಮಾತನಾಡಿ, ಕನ್ನಡಿಗರ ಧ್ವನಿಯಾಗಿ ಕರವೇ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತದೆ. ಕನ್ನಡಿಗರ ಮೇಲೆ ದೌರ್ಜನ್ಯ ನಡೆದರೆ ನಾವೆಂದೂ ಸುಮ್ಮನಿರುವುದಿಲ್ಲ. ದುರುದ್ದೇಶದಿಂದ ಸಾಮಾಜಿಕ ಶಾಂತಿ ಕದಡಲು ಪ್ರಯತ್ನ ಮಾಡಿದರೆ ಕನ್ನಡಿಗರು ಸುಮ್ಮನಿರಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.
ತಾಲೂಕು ಉಪಾಧ್ಯ ಆನಂದ ಪಾಟೀಲ, ಪ್ರಧಾನ ಕಾರ್ಯದರ್ಶಿ ಯೋಗಾನಂದ ಹಿರೇಮಠ, ನಗರ ಟಕದ ಅಧ್ಯ ಈರಪ್ಪ ಕಲ್ಲವಡ್ಡರ, ವಿಶಾಲಗೌಡ ಪಾಟೀಲ, ಗಜಾನನ ಮುಕಾಶಿ, ವಿಜಯ ಪೂಜಾರ, ಹಾಗೂ ಪಿಎಸ್ಐ ಪ್ರವಿಣ ಗಂಗೋಳ ಇತರರಿದ್ದರು.