

ಬಾಲವನದಲ್ಲಿ ಸಾಹಿತಿಗಳಿಗೆ ಶಾಂತವಾಗಿ ಕುಳಿತು ಬರೆಯಲು ಅವಕಾಶವಾಗುವಂತೆ ಅಭಿವೃದ್ಧಿ ಮಾಡಲಾಗುವುದು. ಬಾಲವನ ಸಮಗ್ರವಾಗಿ ಅಭಿವೃದ್ಧಿಯಾಗಬೇಕಾದರೆ, ೧೧ ಮಂದಿಯನ್ನೊಳಗೊಂಡ ಸಮಿತಿ ಅಗತ್ಯವಿದೆ. ಪುತ್ತೂರು ಆಸುಪಾಸಿನ ಕಾರಂತರ ಒಡನಾಡಿಗಳ ಅಭಿನಂದನಾ ಭಾಷಣ, ಕಾರಂತರ ಆಸಕ್ತಿ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡುವಂತಾಗಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಸಹಾಯಕ ಆಯುಕ್ತ ಕಚೇರಿ ಸಭಾಂಗಣದಲ್ಲಿ ಡಾ.ಶಿವರಾಮ ಕಾರಂತರ ೧೨೪ನೇ ಜನ್ಮದಿನೋತ್ಸವ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಮಾತನಾಡಿ, ಬಾಲವನದ ಸಮಸ್ಯೆಗಳ ಬಗ್ಗೆ ಹಲವು ದೂರುಗಳು ಬಂದಿವೆ. ಮುಂದಿನ ದಿನಗಳಲ್ಲಿ ಸಮಿತಿ ರಚಿಸಿ ನಿರಂತರ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.
ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಪ್ರಮುಖರಾದ ಪುರಂದರ ಭಟ್, ಐ.ಕೆ.ಬೊಳುವಾರು, ರಾಘವೇಂದ್ರ ಹಲ್ಕೆರೆ, ನಯನ ರೈ, ಭಾಸ್ಕರ ಬಾರ್ಯ, ಮಾಧವ ಭಟ್, ಚಂದ್ರಶೇಖರ ಆಳ್ವ, ಶ್ರೀಧರ್ ಎಚ್.ಜಿ., ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಮಣ್ಣ ಪಿಲಿಂಜ, ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣು ಪ್ರಸಾದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್, ಪೊಲೀಸ್ ಉಪ ಅಧೀಕ್ಷಕ ಅರುಣ್ ನಾಗೇಗೌಡ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕ ಜಗನ್ನಾಥ ರೈ ಸ್ವಾಗತಿಸಿದರು. ರಮೇಶ್ ಉಳಯ ಕಾರ್ಯಕ್ರಮ ನಿರೂಪಿಸಿದರು.
ಸಮಿತಿ ರಚನೆ
ಬಾಲವನ ಕಾರಂತ ಪ್ರಶಸ್ತಿ-೨೦೨೫ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಅಶೋಕ್ ಕುಮಾರ್ ರೈ, ಪದನಿಮಿತ್ತ ಕಾರ್ಯದರ್ಶಿ ಸ್ಟೆಲ್ಲಾ ವರ್ಗೀಸ್, ಗೌರವ ಸದಸ್ಯರಾಗಿ ಡಾ.ವಸಂತ ಕುಮಾರ್ ತಾಳ್ತಜೆ, ಉಮೇಶ್ ನಾಯಕ್, ಝೇವಿಯರ್ ಡಿಸೋಜ ಅವರನ್ನು ಆಯ್ಕೆ ಮಾಡಲಾಯಿತು.