ತತ್ವಪದಕಾರರು ಬೆಳೆದು ನಿಂತ ಪುಣ್ಯ ನೆಲ ಬೋರಗಿ-ಪುರದಾಳ

Balasaheb Lokapura, Tattupada, Tattva Padkara, Boragi-Puradala, Sindagi,
ಸಿಂದಗಿ ತಾಲೂಕಿನ ಪುರದಾಳ ಗ್ರಾಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಾಳಸಾಹೇಬ ಲೋಕಾಪುರ ಅವರು ಹುಟ್ಟು ಸಾವಿನ ಕಟ್ಟು ಹರಿದು ಕೃತಿ ಬಿಡುಗಡೆಗೊಳಿಸಿದರು. ಡಾ.ಎಂ.ಎಂ.ಪಡಶೆಟ್ಟಿ, ರುದ್ರೇಶ ಕಿತ್ತೂರ, ಆಬ್ದಲುರಹಮಾನ ಬಿದರಕುಂದಿ ಮತ್ತಿತರರಿದ್ದರು.
Published on

ಸಿಂದಗಿ: ಬದುಕು ಮತ್ತು ಅಧ್ಯಾತ್ಮಕ್ಕಿರುವ ನಂಟುಗಳ ಜೀವನವನ್ನು ಸಾಕ್ಷೀಕರಿಸಿದ ತತ್ವಪದಕಾರರ ದೊಡ್ಡ ಚರಿತ್ರೆಯನ್ನು ಹೊಂದಿದ ಪಾವನ ನೆಲ ಬೋರಗಿ-ಪುರದಾಳ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಾಳಾಸಾಹೇಬ ಲೋಕಾಪುರ ಹೇಳಿದರು.

ತಾಲೂಕಿನ ಪುರದಾಳ ಗ್ರಾಮದಲ್ಲಿ ಸದ್ಗುರು ಭೀಮಾಶಂಕರ ಮಹಾರಾಜರ ಜಾತ್ರಾ ಮಹೋತ್ಸವ ಹಾಗೂ ತಿಳಗೂಳದ ಯಮನೂರೇಶ ಶರಣ ದಂಪತಿಯ ನಾಲ್ಕನೇ ವಷರ್ದ ಪುಣ್ಯಸ್ಮರಣೋತ್ಸವದಲ್ಲಿ ಸಾವಿರ ಹಾಡುಗಳ ಸಂತ ಯಮನೂರೇಶ ವಿರಚಿತ ಸಮಗ್ರ ತತ್ವಪದಗಳ ಗ್ರಂಥ 'ಹುಟ್ಟು ಸಾವಿನ ಕಟ್ಟು ಹರಿದು' ಬಿಡುಗಡೆಗೊಳಿಸಿ ಶುಕ್ರವಾರ ಅವರು ಮಾತನಾಡಿದರು.

ಜಾನಪದ ವಿದ್ವಾಂಸ ಡಾ.ಎಂ.ಎಂ.ಪಡಶೆಟ್ಟಿ ಮಾತನಾಡಿ, ಪುರದಾಳ ಮತ್ತು ಬೋರಗಿಯ ಮನೆ-ಮನೆಗಳಲ್ಲಿ ತತ್ವಪದಕಾರರು, ಬಹು ಪರಂಪರೆಯ ಕುರುಹುಗಳಾಗಿ ಉಳಿದುಕೊಂಡಿದ್ದಾರೆ ಎಂದರು.

ತಿಳಗೂಳದ ಚಕ್ರಬಗಳಾಂಭ ಶಕ್ತಿಪೀಠದ ಮಹೇಶ್ವರಾನಂದ ತೀರ್ಥ ಸ್ವಾಮಿಗಳು, ಕೋರವಾರದ ಮುರುಗೇಂದ್ರ ಮಹಾಸ್ವಾಮಿಗಳು ಸಮ್ಮುಖ ವಹಿಸಿದ್ದರು.

ಅಧ್ಯಕ್ಷತೆ ವಹಿಸಿದ್ದ ಚಾಣಾಕ್ಯ ಕರಿಯರ್ ಅಕಾಡೆಮಿ ನಿರ್ದೇಶಕ ಎನ್.ಎಂ.ಬಿರಾದಾರ, ಬಸವರಾಜ ಬೋರಗಿ, ತತ್ವಪದ ಚಿಂತಕರಾದ ರುದ್ರೇಶ ಕಿತ್ತೂರ, ಅಶೋಕ ಹಂಚಲಿ, ಅಶೋಕ ಮಣಿ, ಆರ್.ಬಿ.ಧಮ್ಮೂರಮಠ, ಅನೀತಾ ಸಜ್ಜನ ಮಾತನಾಡಿದರು.

ಚಿಂತಕರಾದ ಅಬ್ದುಲ್ ರಹಮಾನ ಬಿದರಕುಂದಿ, ಪ್ರಭುಗೌಡ ಮದರಕಲ್ಲ, ಜಗದೀಶ ಬಿಳೇಬಾವಿ, ಭೀಮಣ್ಣ ಸುಳಿಭಾವಿ, ಅಶೋಕ ಚಿನಗುಡಿ, ಮಹಾಂತೇಶ ಮುರಾಳ, ಬಸವರಾಜ ಗೊರಜಿ, ಈರತಪ್ಪಣ್ಣ ಸಾತಿಹಾಳ, ಶಿವಪುತ್ರ ಸಾತಿಹಾಳ, ಸಾಹೇಬಗೌಡ ಬಿರಾದಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net