ಬಲರಾಮನೇ ರೈತರ ನಿಜವಾದ ಮೂಲಪುರುಷ

29-AUG-GPT-1
ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಭಾರತೀಯ ಕಿಸಾನ್ ಸಂಘಟನೆಯಿಂದ ಬಲರಾಮ ಜಯಂತಿ ಆಚರಿಸಲಾಯಿತು. ಕೆ.ಎಲ್.ಮಹದೇವಸ್ವಾಮಿ, ಸಿಎಸ್‌ಪಿ ಶಿವಪ್ರಕಾಶ್, ಶಶಿಕುಮಾರ್, ಶಾಂತಪ್ಪ, ವೀರಭದ್ರಸ್ವಾಮಿ, ಗೌಡರ ಚಿನ್ನಸ್ವಾಮಿ, ಜಯಕುಮಾರ್, ಬಸವಣ್ಣ, ಟಿ.ಎಂ.ಮಹದೇವಸ್ವಾಮಿ, ಹಕ್ಕಲಪುರ ಸ್ವಾಮಿ, ವಿ.ಎಸ್.ಗುರುಮಲ್ಲಪ್ಪ ಇದ್ದರು.
Published on

ಗುಂಡ್ಲುಪೇಟೆ: ನೇಗಿಲನ್ನು ತನ್ನ ಆಯುಧವಾಗಿ ಮಾಡಿಕೊಂಡಿದ್ದ ಬಲರಾಮನೇ ರೈತರ ನಿಜವಾದ ಮೂಲಪುರುಷ ಎಂದು ಭಾರತೀಯ ಕಿಸಾನ್ ಸಂಘದ ತಾಲೂಕು ಅಧ್ಯಕ್ಷ ಕೆ.ಎಲ್.ಮಹದೇವಸ್ವಾಮಿ ಹೇಳಿದರು.

ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಭಾರತೀಯ ಕಿಸಾನ್ ಸಂಘಟನೆಯಿಂದ ಶುಕ್ರವಾರ ಆಯೋಜಿಸಿದ್ದ ಬಲರಾಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಪಂಚಕ್ಕೆ ಉಳುಮೆಯನ್ನು ಕಲಿಸಿದ ಬಲರಾಮ ರೈತರ ಮೂಲಪುರುಷನಾಗಿದ್ದು ನೇಗಿಲನ್ನು ತನ್ನ ಆಯುಧವಾಗಿಸಿ ತನ್ನ ಹೆಗಲ ಮೇಲೆ ಸದಾ ಹೊತ್ತುಕೊಂಡಿದ್ದರು. ಪ್ರತಿ ರೈತರು ತಮ್ಮ ಮನೆಗಳಲ್ಲಿ ಬಲರಾಮನ ಭಾವಚಿತ್ರ ಇಟ್ಟು ಆರಾಧಿಸಬೇಕು. ಇದರ ಬಗ್ಗೆ ಅರಿವು ಮೂಡಿಸಲು ಕಿಸಾನ್ ಸಂಘಟನೆ ಕಾರ್ಯಕ್ರಮ ಹಾಕಿಕೊಂಡಿದೆ ಎಂದು ತಿಳಿಸಿದರು.

ಸಂಘಟನೆ ಜಿಲ್ಲಾಧ್ಯಕ್ಷ ಸಿಎಸ್‌ಪಿ ಶಿವಪ್ರಕಾಶ್ ಮಾತನಾಡಿ, ರೈತರಿಗೆ ಸಾವಯವ ಕೃಷಿ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಸಂಘಟನೆಯು ಜಿಲ್ಲೆಯ ಎಲ್ಲ ಹೋಬಳಿಗಳಲ್ಲಿ ಬರಾಮ ಜಯಂತಿಯನ್ನು ಆಚರಿಸಲಾಗುವುದು. ಸೆ.8ರಂದು ಪಟ್ಟಣದ ಸಿಎಂಎಸ್ ಕಲಾಮಂದಿರದಲ್ಲಿ ತಾಲೂಕು ಮಟ್ಟದ ಕಾರ್ಯಕ್ರಮ ಆಯೋಜಿಸಿ ನೈಸರ್ಗಿಕ ಮತ್ತು ಸಾವಯವ ಕೃಷಿಗೆ ಪೂರಕವಾದ ಕಾರ್ಯಕ್ರಮ ಕೈಗೊಳ್ಳಲಾಗುವುದು ಎಂದರು.

ಸಂಘಟನೆ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್, ಮುಖಂಡರಾದ ಶಾಂತಪ್ಪ, ವೀರಭದ್ರಸ್ವಾಮಿ, ಗೌಡರ ಸದಾನಂದ, ಜಯಕುಮಾರ್, ಬಸವಣ್ಣ, ಟಿ.ಎಂ.ಮಹದೇವಸ್ವಾಮಿ, ಹಕ್ಕಲಪುರ ಸ್ವಾಮಿ, ವಿ.ಎಸ್.ಗುರುಮಲ್ಲಪ್ಪ, ಮಹಾಲಿಂಗಯ್ಯ, ಶಿವಕುಮಾರ್, ನಾಗೇಶ್, ಮಲೆಯಪ್ಪ, ಪ್ರಕಾಶ್, ಬಸವಣ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net