ಬನ್ನಳ್ಳಿಹುಂಡಿ ಗ್ರಾಮದಲ್ಲಿ ಬಲರಾಮ ಜಯಂತಿ

01 sep tnp 01 bala RAMA Jayanti
Published on

ತಿ.ನರಸೀಪುರ : ಭಾರತೀಯ ಕಿಸಾನ್ ಸಂಘದ ವತಿಯಿಂದ ತಾಲೂಕಿನ ಬನ್ನಳ್ಳಿಹುಂಡಿ ಗ್ರಾಮದಲ್ಲಿ ರೈತರ ಆರಾಧ್ಯ ದೈವ ಭಗವಾನ್ ಬಲರಾಮರ ಜಯಂತಿಯನ್ನು ಸೋಮವಾರ ಅದ್ದೂರಿಯಾಗಿ ಆಚರಿಸಲಾಯಿತು. ಬಲರಾಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಮಾತನಾಡಿದ ಕಿಸಾನ್ ಸಂಘದ ಗ್ರಾಮ ಘಟಕದ ಅಧ್ಯಕ್ಷ ಜಯಶೀಲ, ನಮ್ಮ ಮತ್ತು ನಮ್ಮೂರಿನ ಕ್ರಿಯಾಶೀಲ ಚಟುವಟಿಕೆಗಳನ್ನು ನಾವೇ ನಿರ್ವಹಿಸಬೇಕು ಎಂದರು. ಯುವಜನರಿಗೆ ಜವಾಬ್ದಾರಿ ನೀಡಿದಾಗ ಪ್ರಗತಿ ವೇಗ ಹೆಚ್ಚಾಗುತ್ತದೆ ಎಂದರು.

ಸಂಘದ ತಾಲೂಕು ಘಟಕದ ಅಧ್ಯಕ್ಷ ನಾಗಲಗೆರೆ ಶಿವಕುಮಾರ್ ಮಾತನಾಡಿ, ಭೂಮಿಯನ್ನು ಉಳುಮೆ ಮಾಡಿ ಬೇಸಾಯ ಮಾಡುವ ಪದ್ಧತಿಯನ್ನು ಮೊದಲಿಗೆ ಕಲಿಸಿಕೊಟ್ಟ ನೇಗಿಲ ಯೋಗಿಯೇ ಬಲರಾಮ ದೇವರು. ಯಮುನಾ ನದಿಗೆ ಮೊದಲು ಅಣೆಕಟ್ಟು ನಿರ್ಮಿಸಿ ನೀರಾವರಿ ಯೋಜನೆಗೆ ಮುನ್ನುಡಿ ಬರೆದವರೇ ಅವರು.

ಅವರ ಸ್ಮರಣೆಯಿಂದ ಕೃಷಿ ರಂಗದ ಪ್ರಗತಿ ಆಗಬೇಕು ಎಂದರು.

ಸಂಘದ ಜಿಲ್ಲಾಧ್ಯಕ್ಷ ಪ್ರಭುಸ್ವಾಮಿ ಚಿಕ್ಕಹೊಮ್ಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ಗಂಡತೂರು ಮಾತನಾಡಿದರು. ನಂಜನಗೂಡು ಘಟಕದ ಉಪಾಧ್ಯಕ್ಷ ಅಶೋಕ್, ಸಂಘಟನಾ ಕಾರ್ಯದರ್ಶಿ ಸೋಮ ಶೇಖರ್, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಮರಡಿಪುರ ಮಹದೇವ ಪ್ರಭು, ಮುಖಂಡರಾದ ನಾಗರಾಜು, ನಿಲ್ಸೋಗೆ ದುಂಡ ನಾಯಕ, ಸಿದ್ದರಾಜು, ನಾಗಲಗೆರೆ ಆನಂದ, ರಂಗಸ್ವಾಮಿ, ವಿರೂಪಾಕ್ಷ, ಮಲ್ಲಿಕಾರ್ಜುನ, ಗಿರೀಶ, ಮುಕುಂದ ಸೇರಿದಂತೆ ಗ್ರಾಮ ಘಟಕದ ಸದಸ್ಯರು, ಯಜಮಾನರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net