ಬಾಲರ ಬ್ಲಾಸ್ಟರ್ಸ್ ತಂಡ ಚಾಂಪಿಯನ್

balar blasters
Published on

ಹುಬ್ಬಳ್ಳಿ: ರಾಜಸ್ಥಾನದ ಬಾಡಮೇರ ಜಿಲ್ಲೆಯ ಸಿವಾನಾದಲ್ಲಿ ಆಲ್ ಇಂಡಿಯಾ ಶಿವಾಂಚಿ ಜೈನ್ ಆರ್ಗನೈಜೇಶನ್ ಆಯೋಜಿಸಿದ್ದ ಪ್ರಿಮೀಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಹುಬ್ಬಳ್ಳಿಯ ಬಾಲರ ಬ್ಲಾಸ್ಟರ್ಸ್ ತಂಡ ಚಾಂಪಿಯನ್ ಆಗಿದೆ.

ಫೈನಲ್​ನಲ್ಲಿ ಅಹಮದಾಬಾದಿನ ಬಾಗರೇಚಾ ಫೈಟರ್ಸ್ ವಿರುದ್ಧ ಬಾಲರ ಬ್ಲಾಸ್ಟರ್ಸ್ 61ರನ್​ಗಳ ಅಂತರದಿಂದ ಜಯ ಗಳಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಲರ ಬ್ಲಾಸ್ಟರ್ಸ್ 10 ಓವರ್​ಗಳಲ್ಲಿ 3 ವಿಕೆಟ್​ಗೆ 138 ರನ್ ಗಳಿಸಿತ್ತು. ಆರಂಭಿಕ ಬ್ಯಾಟರ್ ಸುರೇಶ್ ಜೈನ್(ಲಕ್ಕಿ) ಮತ್ತು ಪ್ರದೀಪ ಜೈನ್ ಸೇರಿ 5 ಓವರ್​ಗಳಲ್ಲಿ 79 ರನ್ ಸೇರಿಸಿದ್ದರು. ಬಾಗರೇಚಾ ಫೈಟರ್ಸ್ 10 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 77ರನ್ ಗಳಿಸಿತು.

ಗೌತಮ ಜೈನ್ ಉತ್ತಮ ಬೌಲರ್, ಪ್ರದೀಪ ಜೈನ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಜೋಧಪುರ, ಬೆಂಗಳೂರು, ಮುಂಬೈ, ಹೈದರಾಬಾದ್ ತಂಡಗಳು ಭಾಗವಹಿಸಿದ್ದವು. ಹುಬ್ಬಳ್ಳಿಯ ಬಾಲರ ಬ್ಲಾಸ್ಟರ್ಸ್ ತಂಡ

ಮೊದಲ ಲೀಗ್ ಪಂದ್ಯದಲ್ಲಿ ಜೋಧಪುರ, ಎರಡನೇ ಲೀಗ್ ಪಂದ್ಯದಲ್ಲಿ ಬೆಂಗಳೂರು ತಂಡವನ್ನು ಸೋಲಿಸಿ ಸೆಮಿಫೈನಲ್ ಗೆ ಪ್ರವೇಶಿಸಿತ್ತು. ಸೆಮಿ ಫೈನಲ್​ನಲ್ಲಿ ಮುಂಬೈ ತಂಡವನ್ನು ಸೋಲಿಸಿ ಫೈನಲ್​ಗೆ ಪ್ರವೇಶ ಪಡೆದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net