ಬಾಲೇಪುರ ಎಂಪಿಸಿಎಸ್​ಗೆ 4.87 ಲಕ್ಷ ರೂಪಾಯಿ ನಿವ್ವಳ ಲಾಭ

20 08 2025_BGR_RURAL-PAGE_04
ದೇವನಹಳ್ಳಿ ತಾಲೂಕು ಬಾಲೇಪುರ ಹಾಲು ಉತ್ಪಾದಕರ ಸಹಕಾರ ಸಂದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ವಿಸ್ತರಣಾಧಿಕಾರಿ ರುನಾಥ್​ ಮಾತನಾಡಿದರು. ಉಪಾಧ್ಯೆ ನಾಗವೇಣಿ, ನಿರ್ದೇಶಕರಾದ ನಾಗರಾಜ್​, ಎನ್​.ನಂಜಪ್ಪ, ಕೆಂಪಣ್ಣ, ಮುನಿರಾಜು, ಮುನಿಕೃಷ್ಣಪ್ಪ, ವೀರಣ್ಣ, ರಾಮಕೃಷ್ಣಪ್ಪ, ಮುನಿಯಮ್ಮ, ವರಲಕ್ಷ$್ಮಮ್ಮ, ಮಂಜುನಾಥ್​ ಇದ್ದರು.
Published on

ಚನ್ನರಾಯಪಟ್ಟಣ : ಬಾಲೇಪುರ ಎಂಪಿಸಿಎಸ್​ಗೆ 4.87 ಲಕ್ಷ ವಾರ್ಷಿಕ ನಿವ್ವಳ ಲಾಭ ಬಂದಿದೆ ಎಂದು ವಿಸ್ತರಣಾಧಿಕಾರಿ ರುನಾಥ್​ ಹೇಳಿದರು.

ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿ ಬಾಲೇಪುರ ಹಾಲು ಉತ್ಪಾದಕರ ಸಹಕಾರ ಸಂದ 2024&25 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಹಾಲು ಸರಬರಾಜು ಮಾಡುವ ರೈತರಿಗೆ ಶೇ.100ಕ್ಕೆ ಮೂರು ರೂಪಾಯಿ ಹತ್ತು ಪೈಸೆ ಬೋನಸ್​ ಸಿಗುತ್ತದೆ. ಗುಣಮಟ್ಟದ ಹಾಲು ಸರಬರಾಜು ಮಾಡಿದರೆ ರೈತರಿಗೂ ಹೆಚ್ಚಿನ ಆದಾಯ ಸಿಗುತ್ತದೆ. ರಾಸುಗಳಿಗೆ ಮಿನರಲ್​ ಮಿಕ್ಸರ್​, ಗೋದರ್​ ಶಕ್ತಿ, ಪಶು ಆಹಾರ ಪ್ರತಿದಿನ ಹಸುಗಳಿಗೆ ನೀಡಿದರೆ ಗುಣಮಟ್ಟದ ಹಾಲು ಸಿಗುತ್ತದೆ. ಬಮುಲ್​ನಿಂದ ರಾಸು ವಿಮೆ, ಸರಬರಾಜು ಮಾಡುವ ಸದಸ್ಯರಿಗೆ ಯಶಸ್ವಿನಿ ಸೇರಿ ಹಲವು ಸೌಲಭ್ಯ ಪಡೆದುಕೊಳ್ಳಬಹುದು ಎಂದರು.

ಅಧ್ಯಕ್ಷ ಕೆಂಪಣ್ಣ ಮಾತನಾಡಿ, ಎಲ್ಲ ಸದಸ್ಯರ ಸಹಕಾರದಿಂದ ಸಂ ಅಭಿವೃದ್ಧಿಯಾಗುತ್ತಿದೆ. ಹಾಲು ಸರಬರಾಜು ಮಾಡುವ ರೈತರಿಗೆ ಸಬ್ಸಿಡಿ ದರದಲ್ಲಿ ರಾಸುಗಳಿಗೆ ಮ್ಯಾಟ್​, ಮೇವು ಕಟರ್​ ಯಂತ್ರ, ರೈತರಿಗೆ ಬಮುಲ್​ ವಿಮೆ ಯೋಜನೆ ಸೇರಿ ಹಲವು ಸೌಲಭ್ಯ ಪಡೆದುಕೊಳ್ಳಬಹುದು. ಹೈನುಗಾರಿಕೆಯಿಂದ ರೈತರಿಗೆ ಆರ್ಥಿಕ ಆದಾಯ ಹೆಚ್ಚುತದೆ ಎಂದರು. ಸಂದ ಮಾಜಿ ಅಧ್ಯಕ್ಷ ರಾಮಾಂಜಿನಪ್ಪ, ನಿವೃತ್ತ ಕಾರ್ಯದರ್ಶಿ ಕೆಂಪರಾಜ್​, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಕೆ.ಹರೀಶ್​ ಕುಮಾರ್​, ಹಾಲು ಪರೀಕ್ಷಕ ಮುನಿಕಾಂತಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net