ಹಸಿರೀಕರಣದಿಂದ ಸಮತೋಲನ

BIRUR parisara
ಬಳ್ಳಿಗನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಗಿಡ ನೆಡಲಾಯಿತು. ಕಲ್ಪತರು ಸಂಸ್ಥೆಯ ಪ್ರಕಾಶ್, ಪ್ರೇಮಕುಮಾರಿ, ಹೊಚಳಪ್ಪ, ನಾಗಾರಾಜ್, ನೇತ್ರಾ, ಸವಿತಾ ಇತರರಿದ್ದರು.
Published on

ಬೀರೂರು: ಪರಿಸರ ಸಮತೋಲನಕ್ಕೆ ಹಸಿರಿನ ಅಗತ್ಯವಿದ್ದು ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಹಸಿರೀಕರಣ ಮಾಡಬೇಕು ಎಂದು ಕಲ್ಪತರು ಸಂಸ್ಥೆ ಪ್ರಕಾಶ್ ತಿಳಿಸಿದರು.

ಬಳ್ಳಿಗನೂರು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಬುಧವಾರ ಗಿಡ ನೆಟ್ಟು ಮಾತನಾಡಿ, ಜಗತ್ತಿನಲ್ಲಿ ಹಲವಾರು ಕಾರಣಗಳಿಂದ ಇಂಗಾಲ ಹೆಚ್ಚುತ್ತಿರುವುದರಿಂದ ಪ್ರಕೃತಿ ವಿಕೋಪಗಳಾಗುತ್ತಿವೆ. ಇದರ ಸಮತೋಲನಕ್ಕಾಗಿ ಸರ್ಕಾರಗಳು ಸೌರಶಕ್ತಿ ಬಳಕೆ, ವನಗಳ ಸಂರಕ್ಷಣೆ, ಬ್ಯಾಟರಿ ಚಾಲಿತ ವಾಹನಗಳ ಬಳಕೆಗೆ ಉತ್ತೇಜನ ನೀಡುತ್ತಿವೆ. ಜತೆಗೆ ಕಸ ವಿಲೇವಾರಿಗೆ ವಿನೂತನ ಕಾರ್ಯಕ್ರಮಗಳು ಹಾಗೂ ಪ್ಲಾಸ್ಟಿಕ್ ನಿಷೇಧದಂಥ ಕ್ರಮಗಳನ್ನು ಕೈಗೊಳ್ಳುತ್ತಿವೆ ಎಂದು ಹೇಳಿದರು.
ಮುಖ್ಯಶಿಕ್ಷಕಿ ಪ್ರೇಮಕುಮಾರಿ ಮಾತನಾಡಿ, ಜನರು ಪರಿಸರ ಸಂರಕ್ಷಣೆ ಕಾರ್ಯಕ್ರಮಗಳಲ್ಲಿ ಕೈಜೋಡಿಸಿದರೆ ಹಸಿರೀಕರಣವಾಗಲಿದೆ. ಯುವಜನರಲ್ಲಿ ಪರಿಸರ ಸಂರಕ್ಷಣೆ ಮಹತ್ವ ತಿಳಿಸಬೇಕು ಎಂದರು.
ಸಹ ಶಿಕ್ಷಕ ಹೊಚಳಪ್ಪ, ನಾಗಾರಾಜ್, ಸುವರ್ಣ ಒಡೆಯರ್, ನೇತ್ರಾ, ಸವಿತಾ, ಜಯಶ್ರೀ, ಜ್ಞಾನಪ್ಪ, ಪುಷ್ಪಲತಾ, ಸುರೇಶ್ ಮತ್ತು ಶಾಲಾ ಮಕ್ಕಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net