

ಬೈಲಹೊಂಗಲ: ಜಾತ್ರಾ ಮಹೋತ್ಸವಕ್ಕೆ 3ಲ ರೂ.ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಟಕದ ವ್ಯವಸ್ಥೆ ಮಾಡಿದ ಬಾಳನಗೌಡ ಪಾಟೀಲ ಅವರ ಸಮಾಜಮುಖಿ ಸೇವೆ ಮಾದರಿಯಾಗಿದೆ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.
ಸಮೀಪದ ನಯಾನಗರ ಗ್ರಾಮದಲ್ಲಿ ಶನಿವಾರ ಶ್ರೀ ಸುಖದೇವಾನಂದ ಮಠದ ಜಾತ್ರೆ ಅಂಗವಾಗಿ ಭಕ್ತರು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಸ್ವರಾಜ್ ಆರ್.ಓ.ಇಂಡಸ್ಟ್ರೀಜ್ ಮಾಲೀಕ ಬಾಳನಗೌಡ ಪಾಟೀಲ ಕೊಡುಗೆ ನೀಡಿದ ಶುದ್ಧ ಕುಡಿಯುವ ನೀರಿನ ಟಕ ಉದ್ಘಾಟಿಸಿ ಮಾತನಾಡಿದರು.
ಜನರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಇಂಥಹ ಕಾರ್ಯ ಮಾಡುತ್ತಿರುವುದು ಪುಣ್ಯದ ಕೆಲಸವಾಗಿದೆ ಎಂದರು.
ಮಾಜಿ ಶಾಸಕ ವಿಶ್ವನಾಥ ಪಾಟೀಲ ಮಾತನಾಡಿ, ಬಾಳನಗೌಡ ಅವರು ಈಗಾಗಲೇ ೇತ್ರದಲ್ಲಿ ಡಾ.ವಿ.ವೈ.ಪಾಟೀಲ ೌಂಡೇಷನ್ ವತಿಯಿಂದ 26 ಶುದ್ಧ ಕುಡಿಯುವ ನೀರಿನ ಟಕಗಳನ್ನು ಜನರಿಗಾಗಿ ನಿರ್ಮಿಸಿದ್ದಾರೆ. ಮುಂಬರುವ ದಿನಗಳಲ್ಲಿ ಪ್ರತಿ ಗ್ರಾಮಗಳಲ್ಲೂ ನೀರಿನ ಟಕ ನಿರ್ಮಿಸುವ ಗುರಿ ಹೊಂದಲಾಗಿದೆ ಎಂದರು.
ಅಭಿನವಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಧಾರ್ಮಿಕ ಕಾರ್ಯಗಳಲ್ಲಿ ಕೈ ಜೋಡಿಸುತ್ತಿರುವ ಶ್ರೀಮಠದ ಭಕ್ತರ ಸೇವೆ ಅಪಾರವಾಗಿದೆ ಎಂದರು.
ಜಿಪಂ ಮಾಜಿ ಸದಸ್ಯ ಶಂಕರ ಮಾಡಲಗಿ, ಬಾಳನಗೌಡ ಪಾಟೀಲ, ಪೂಜ್ಯರು ಹಾಗೂ ಗ್ರಾಮಸ್ಥರು ಇತರರಿದ್ದರು.