

ವಿಜಯವಾಣಿ ಸುದ್ದಿಜಾಲ ಹೆಬ್ರಿ
ಅಜೆಕಾರು ದೆಪ್ಪುತ್ತೆಯ ಪತಿ ಬಾಲಕೃಷ್ಣ ಕೊಲೆಗೆ ಸಂಬಂಧಿಸಿ ಕೊಲೆ ಆರೋಪಿ ಪ್ರತಿಮಾ ತನ್ನ ಪತಿ ಬಾಲಕೃಷ್ಣಗೆ ಆಹಾರದಲ್ಲಿ ಆರ್ಸೆನಿಕ್ ಟ್ರೈಆಕ್ಸೈಡ್ ವಿಷ ಪದಾರ್ಥ ಸೇರಿಸಿದ್ದರು ಎಂದು ಎಂದು ಉಡುಪಿ ಪೋಲೀಸ್ ವರಿಷ್ಠಾಧಿಕಾರಿ ಅರುಣ್ ಕೆ. ತಿಳಿಸಿದ್ದಾರೆ.
ವಿಷ ವಸ್ತುವನ್ನು ಪ್ರಿಯಕರ ದಿಲೀಪ್ ಹೆಗ್ಡೆ ಉಡುಪಿಯ ಪ್ರಯೋಗಾಲಯದಿಂದ ಖರೀದಿಸಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅಜೆಕಾರು ಪೊಲೀಸರು ರಾಮನ್ಸ್ ಲ್ಯಾಬ್ ಮಾಲೀಕ ಹಾಗೂ ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಆರ್ಸೆನಿಕ್ ಟ್ರೈಆಕ್ಸೈಡ್ ರಾಸಾಯನಿಕ ವಸ್ತು ಹೆಚ್ಚು ವಿಷಕಾರಿ ಮತ್ತು ಬಹುಮುಖ ಸಂಯುಕ್ತ ವಸ್ತು. ಇದನ್ನು ಶಾಲಾ-ಕಾಲೇಜುಗಳ ಲ್ಯಾಬ್‌ಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಬಿಳಿ, ಹಳದಿ ಬಣ್ಣದ ಪುಡಿ. ವಾಸನೆಯಿಲ್ಲ. ಈ ವಿಷಕಾರಿ ವಸ್ತು ನೀರು, ಎಥೆನಾಲ್ ಸಹಿತ ಇತರ ಸಾವಯವ ದ್ರಾವಕಗಳಲ್ಲಿ ಕರಗುತ್ತದೆ. ಆರ್ಸೆನಿಕ್ ಟ್ರೈಆಕ್ಸೈಡ್ ಸೇವನೆಯಿಂದ ವಾಕರಿಕೆ, ಅತಿಸಾರ, ಹೊಟ್ಟೆ ನೋವು, ಆಯಾಸ, ತಲೆನೋವು, ತಲೆ ತಿರುಗುವಿಕೆ, ದೌರ್ಬಲ್ಯ, ರಕ್ತಹೀನತೆ, ಥ್ರಂಬೋ ಸೈಟೋಪೆನಿಯಾ(ಕಡಿಮೆ ಪ್ಲೇಟ್ಲೆಟ್ ಎಣಿಕೆ), ಲ್ಯುಕೋಪೆನಿಯಾ(ಕಡಿಮೆ ಬಿಳಿ ರಕ್ತ ಕಣಗಳ ಸಂಖ್ಯೆ), ಪ್ಲಾಸ್ಟಿಕ್ ರಕ್ತಹೀನತೆ(ಮೂಳೆ ಮಜ್ಜೆಯ ವೈಫಲ್ಯ), ರಕ್ತ ಕಟ್ಟಿ ಹೃದಯ ಸ್ತಂಭನ, ಉಸಿರಾಟದ ವೈಫಲ್ಯ, ರೋಗಗ್ರಸ್ತವಾಗುವಿಕೆ, ಕೋಮಾ, ನರವೈಜ್ಞಾನಿಕ ಹಾನಿ ಹೆಪಟೊಟಾಕ್ಸಿಸಿಟಿ(ಯಕೃತ್ತಿನ ಹಾನಿ), ನೆಫ್ರಾಟಾಕ್ಸಿಸಿಟಿ(ಮೂತ್ರಪಿಂಡದ ಹಾನಿ), ಸೆಕೆಂಡರಿ ಕ್ಯಾನ್ಸರ್‌ಗಳು ಕಾಡುತ್ತವೆ.
ಈ ವಿಷವನ್ನು ದಿಲೀಪ್ ಹೆಗ್ಡೆ ಉಡುಪಿಯ ಲ್ಯಾಬ್‌ನಿಂದ ತರಿಸಿ ಪ್ರತಿಮಾಳಿಗೆ ನೀಡಿದ್ದ. ಪ್ರತಿಮಾ ನಿತ್ಯ ಅಹಾರದ ಜತೆ ಪತಿ ಬಾಲಕೃಷ್ಣ ಅವರಿಗೆ ಆಹಾರದಲ್ಲಿ ಕರಗಿಸಿ ನೀಡುತಿದ್ದಳು. ಇದರಿಂದಾಗಿ ಬಾಲಕೃಷ್ಣ ಅಂಗಾಗಗಳ ಸಂವೇದನೆ ಕಳೆದು ಆಸ್ಪತ್ರೆಗೆ ಅಲೆಯುವಂತಾಯಿತು.