

ಕಲಬುರಗಿ: ನಗರದ ಕೆಬಿಎನ್ ರ‍್ಗಾ ಹತ್ತಿರದ ದಾರೂಲ್ ಉಲುಮ ದೀನಿಯಾ ಬಂದೇಜವಾಜಿಯಾ ಮದರಸಾದಿಂದ ಇಬ್ಬರು ಬಾಲಕರು ನಾಪತ್ತೆಯಾಗಿದ್ದಾರೆ. ಬಳ್ಳಾರಿ ಜಿಲ್ಲೆಯ ಹೊಸಪೇಟದ ಇಬ್ರಾಹಿಂ (೧೧), ಈಸ್ಟ್ ಮುಂಬೈನ ದಸ್ತಗಿರ್ ಹುಸೇನ್ ಸೈಯದ್ (೧೩) ನಾಪತ್ತೆಯಾದವರು. ಮದರಸಾದಲ್ಲಿ ಅರಬ್ಬಿ ಭಾಷೆಯಲ್ಲಿ ಅಭ್ಯಾಸ ಮಾಡುತ್ತಿದ್ದು, ಜೂ.೧೨ರಂದು ಬೆಳಗ್ಗೆ ೧೧ಕ್ಕೆ ಮದರಸಾ ಬಿಟ್ಟು ಹೋಗಿದ್ದಾರೆ. ಈ ಕುರಿತು ಬಾಲಕರ ಪಾಲಕರಿಗೆ ಕರೆ ಮಾಡಿ ವಿಚಾರಿಸಿದ್ದು, ಮನೆಗೂ ಬಂದಿಲ್ಲ ಎಂದಿದ್ದಾರೆ. ಮದರಸಾ ಮುಖ್ಯಗುರು ಮಹ್ಮದ್ ತನವೀರ್ ನೀಡಿದ ದೂರಿನಂತೆ ರೋಜಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.