ತುಂಗಾನದಿಯಲ್ಲಿ ಬಾಲಕ ನೀರುಪಾಲು

10 TTH 02
ತುಂಗಾ ನದಿಯಲ್ಲಿ ಬಾಲಕ ಮುಳಗಿದ ಸ್ಥಳದಲ್ಲಿ ಸೇರಿರುವ ಸಾರ್ವಜನಿಕರು.
Published on

ತೀರ್ಥಹಳ್ಳಿ: ಪಟ್ಟಣದಲ್ಲಿ ಗುರುವಾರ ಆರಂಭವಾಗಲಿರುವ ಐತಿಹಾಸಿಕ ಎಳ್ಳಮಾವಾಸ್ಯೆ ಜಾತ್ರೆ ವ್ಯಾಪಾರಕ್ಕೆ ಆಗಮಿಸಿದ್ದ ಓರ್ವ ಬಾಲಕ ಬುಧವಾರ ತುಂಗಾನದಿಯಲ್ಲಿ ಸ್ನಾನಕ್ಕೆ ಹೋದಾಗ ಮುಳುಗಿ ಮೃತನಾಗಿದ್ದಾನೆ. ಜಾತ್ರೆಯಲ್ಲಿ ಊದುವ ಪೀಪಿ ಮಾರಲು ಬಂದಿದ್ದ ಬಿಹಾರ ಮೂಲದ 13 ವರ್ಷದ ಆರ್ೀ ಮೃತ ಬಾಲಕ. ತಂದೆ ಸೇರಿ ಮೂವರ ಜತೆ ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಅಗ್ನಿಶಾಮಕದಳದವರು ಶವದ ಹುಡುಕಾಟ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net