ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ: ತಂದೆ ಸಾವಿನ ನೋವಲ್ಲೂ ಬಾಲಾಜಿ ಸಾಧನೆ

Balaji performs well in SSLC results Mandya
Published on

ಮಂಡ್ಯ: ತಾಲೂಕಿನ ಚಿಂದಗಿರಿದೊಡ್ಡಿ ಗ್ರಾಮದಲ್ಲಿ ತಂದೆಯ ಅಕಾಲಿಕ ಸಾವಿನ ನೋವಿನಲ್ಲೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ನಂತರ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದ ಬಾಲಾಜಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾನೆ.

ಚಿಕ್ಕಮಂಡ್ಯ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಾಜಿ 332 ಅಂಕ ಪಡೆದಿದ್ದಾನೆ. ಆಂಗ್ಲ ಭಾಷೆ ಪರೀಕ್ಷೆ ಬರೆಯುವ ದಿನವೇ ಆತನ ತಂದೆ ನಿಧನರಾಗಿದ್ದರು. ಒಂದೆಡೆ ತಂದೆಯ ಸಾವು, ಮತ್ತೊಂದೆಡೆ ಪರೀಕ್ಷೆ ಬರೆಯಬೇಕಾದ ಸ್ಥಿತಿಯಿಂದ ಬಾಲಾಜಿಗೆ ದಿಕ್ಕು ತೋಚದಂತಾಗಿತ್ತು. ಮುಖ್ಯಶಿಕ್ಷಕ ಎಚ್.ಎನ್.ದೇವರಾಜು, ಎಸ್‌ಡಿಎಂಸಿ ಅಧ್ಯಕ್ಷ ಸಿ.ಎಂ.ಮಹೇಶ್, ಶಿಕ್ಷಕರಾದ ಬಸವರಾಜು, ಅಣ್ಣೇಗೌಡ, ರವಿಶಂಕರ್ ಮತ್ತು ಸಹಪಾಠಿಗಳು ಆತನಿಗೆ ಸಾಂತ್ವನ ಹೇಳಿದರು. ಮಾತ್ರವಲ್ಲದೆ ಪರೀಕ್ಷೆ ಬರೆಯುವಂತೆ ಆತ್ಮಸ್ಥೈರ್ಯ ತುಂಬಿದರು. ತಂದೆ ಮತ್ತು ತಾಯಿಯನ್ನು ಕಳೆದುಕೊಂಡಿರುವ ಬಾಲಾಜಿ ಅಜ್ಜಿಯ ಆಶ್ರಯದಲ್ಲಿ ಬೆಳೆಯುತ್ತಿದ್ದಾನೆ.

Balaji performs well in SSLC results Mandya
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net