97ರ ವೃದ್ಧರಿಗೆ ಚಪ್ಪೆಮುರಿತ ಶಸ್ತ್ರಚಿಕಿತ್ಸೆ ಯಶಸ್ವಿ

Balaji Multi Specialty Hospital, Dr. Sripada Kulkarni, Treatment, Fracture, Surgery,
ವಿಜಯಪುರ ಜಿಲ್ಲೆಯ ಬಾಬಾನಗರ ಗ್ರಾಮದ ವಯೋವೃದ್ಧ ನಾನಾಸಾಹೇಬ ಕುಲಕರ್ಣಿ ಅವರಿಗೆ ಬಾಲಾಜಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯ ಎಲಬು-ಕೀಲು ರೋಗಗಳ ವೈದ್ಯ ಡಾ. ಶ್ರೀಪಾದ ಕುಲಕರ್ಣಿ ಚಪ್ಪೆ ಮುರಿತದ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ಮೇಲೆ ಲವಲವಿಕೆಯಿಂದ ನಡೆಯುತ್ತಿದ್ದಾರೆ.
Published on

ವಿಜಯಪುರ: ಹದಿಹರೆಯದವರ ಚಪ್ಪೆಯ (ಹಿಪ್) ಭಾಗದಲ್ಲಿ ಮೂಳೆ ಮುರಿತವಾದರೆ ಅದನ್ನು ಸರಿಪಡಿಸುವಲ್ಲಿ ಹೈರಾಣಾಗುತ್ತದೆ. ಅಂತದ್ದರಲ್ಲಿ 97ರ ವಯೋವೃದ್ಧರ ಮುರಿದ ಚಪ್ಪೆಯನ್ನು ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿ ಸರಿಪಡಿಸುವ ಮೂಲಕ ನಗರದ ಬಾಲಾಜಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಸಾಧನೆ ಮಾಡಿದೆ.

ಜಿಲ್ಲೆಯ ಬಾಬಾನಗರದ ದ್ರಾಕ್ಷಿ ಬೆಳೆಗಾರ ವಯೋವೃದ್ಧರಾದ ನಾನಾಸಾಹೇಬ ಕುಲಕರ್ಣಿ ಎಂಬುವವರು ಜುಲೈ 29ರಂದು ಮನೆಯಲ್ಲಿ ಬಿದ್ದ ಪರಿಣಾಮ ಅವರ ಚಪ್ಪೆ ಮುರಿದು ಹೋಯಿತು. ಕುಟುಂಬದವರು ಅವರನ್ನು ನಗರದ ಖ್ಯಾತ ಆರ್ಥೋಪೆಡಿಕ್ ಶಸ್ತ್ರಚಿಕಿತ್ಸಕ ಡಾ. ಶ್ರೀಪಾದ ಕುಲಕರ್ಣಿ ಅವರಲ್ಲಿ ಕರೆದುಕೊಂಡು ಬಂದಿದ್ದರು.

ವೃದ್ಧರ ಸ್ಥಿತಿ ಗಮನಿಸಿದಾಗ ಅವರಿಗೆ ಶಸ್ತ್ರಚಿಕಿತ್ಸೆಯೊಂದೇ ಸೂಕ್ತ ಪರಿಹಾರವಾಗಿತ್ತು. ಆದರೆ ವಯಸ್ಸಿನ ಪರಿಮಿತಿ ಬಗ್ಗೆ ಚಿಂತನೆ ನಡೆಸಿದಾಗ ವೃದ್ಧ ನಾನಾ ಸಾಹೇಬರೂ ಸಹಕರಿಸಿದರು. ನಂತರ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ, ಯಶಸ್ವಿಯಾಗಿದ್ದಾರೆ. ಕೆಲವೇ ದಿನಗಳಲ್ಲಿ ವೃದ್ಧರು ಎಲ್ಲರಂತೆ ಚೇತರಿಸಿಕೊಂಡಿದ್ದು, ಸಾಮಾನ್ಯರಂತೆ ಓಡಾಡುವಂತಾಗಿದ್ದಾರೆ.

ವಯೋವೃದ್ಧರಿಗೆ ಚಪ್ಪೆ ಮುರಿತ ಶಸ್ತ್ರಚಿಕಿತ್ಸೆ ಮಾಡಬಹುದು. ಆದರೆ ಅದಕ್ಕೆ ರೋಗಿಯೂ ಸ್ಪಂದಿಸಬೇಕು. ನಾನಾ ಸಾಹೇಬರು ಧೈರ್ಯವಾಗಿದ್ದರಲ್ಲದೇ, ಚಿಕಿತ್ಸೆ ನಂತರವೂ ಲವಲವಿಕೆಯಿಂದ ಸಹಕರಿಸಿದ ಪರಿಣಾಮ ಬೇಗ ಗುಣಮುಖರಾಗಿದ್ದಾರೆ. ಪ್ರತಿ ತಿಂಗಳ ಎರಡನೇ ಗುರುವಾರ ವೃದ್ಧರಿಗೆ ಉಚಿತವಾಗಿ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.
ಡಾ. ಶ್ರೀಪಾದ ಕುಲಕರ್ಣಿ, ಬಾಲಾಜಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ
ಚಪ್ಪೆ ಮುರಿದ ಪರಿಣಾಮ ಹೇಗಪ್ಪಾ ಎಂದು ಚಿಂತಿತರಾಗಿದ್ದೆವು. ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಸರಿಪಡಿಸಿದ್ದು, ನಮ್ಮ ತಂದೆಗೆ ಮರುಜೀವ ಬರುವ ಹಾಗೆ ಮಾಡಿದ್ದಾರೆ. ವೈದ್ಯರ ಕಾಳಜಿಗೆ ಧನ್ಯವಾದಗಳು. ಅವರಿಗೆ ನಾವೆಲ್ಲರೂ ಆಭಾರಿಯಾಗಿದ್ದೇವೆ.
ಜವಾಹರ ಕುಲಕರ್ಣಿ, ರೋಗಿಯ ಪುತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net