

ವಿಜಯವಾಣಿ ಸುದ್ದಿಜಾಲ ಗದಗ
ತಾಲೂಕಿನ ಸುೇತ್ರ ಬಳಗಾನೂರಿನ ಚಿಕೇನಕೊಪ್ಪದ ಚನ್ನವಿರ ಶರಣರ ಮಠದಲ್ಲಿ ಚನ್ನವಿರಶರಣರ 30ನೇ ಪುಣ್ಯ ಸ್ಮರಣೋತ್ಸವ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಮಹಾತ್ಮರ ಜೀವನ ದರ್ಶನ ಪ್ರವಚನದ ಮಂಗಲೋತ್ಸವ ಕಾರ್ಯಕ್ರಮ ಜರುಗಿತು.
ಹೂವಿನಹಡಗಲಿ ಗವಿಮಠದ ಹಿರಿಯ ಶಾಂತವೀರ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಸಮಾಜದಲ್ಲಿ ಮೊಬೈಲ್ ಹಾವಳಿಯಿಂದ ಒಳ್ಳೆಯ ಮಾತು ಕೇಳಲು ಮತ್ತು ಮಾತನಾಡಲು ಹಾಗೂ ಒಳ್ಳೆಯ ಕೆಲಸಕ್ಕೆ ಸಮಯವಿಲ್ಲದಂತಾಗಿದೆ. ಸಾಮಾಜಿಕ ಜಾಲತಾಣದಿಂದ ನಮ್ಮತನವನ್ನು ಕಳೆದುಕೊಳ್ಳುತ್ತಿರುವುದು ವಿಷಾದಕರ. ಮೊದಲು ಮನೆ ಚಿಕ್ಕದಾಗಿ, ಮನಸಿನ ವೈಶಾಲತೆ ಇತ್ತು. ಈಗ ಮನೆ ದೊಡ್ಡದಾಗಿವೆ. ಮನಸ್ಸು ಚಿಕ್ಕದಾಗುತ್ತಿದೆ. ಮನುಷ್ಯನನ್ನು ಎತ್ತರಕ್ಕೆ ಒಯ್ಯಲು ಗುರುನಿಷ್ಠೆ, ಶ್ರದ್ಧೆ ವಿಶ್ವಾಸ, ಬಂಧುತ್ವ, ಪ್ರೇಮತ್ವ ಮುಖ್ಯವಾಗಿದೆ. ಇಂತಹ ಎಲ್ಲ ಅಂಶಗಳನ್ನು ಶಿವಶಾಂತವೀರ ಶರಣರಲ್ಲಿ ಕಾಣುತ್ತೇವೆ ಎಂದರು.
ವಿಧಾನಪರಿಷತ ಸದಸ್ಯ ಎಸ್. ವಿ. ಸಂಕನೂರ ಮಾತನಾಡಿ, ಮಹಾತ್ಮರ ಪ್ರವಚನವು, ಭಕ್ತರಿಗೆ ಸರಿಯಾದ ಮಾರ್ಗಕ್ಕೆ ತರುವುದಾಗಿದೆ. ಪ್ರವಚನದಿಂದ ಸುವ್ಯವಸ್ಥಿತ ಸಮಾಜ ನಿರ್ಮಾಣ ಮಾಡಲು ಸಹಾಯಕ. ಇಂತಹ ಪವಿತ್ರ ಕಾರ್ಯಕ್ರಮವದಲ್ಲಿ ಭಾಗವಹಿಸುವುದರಿಂದ ಸಮಾಜದಲ್ಲಿ ಯಾವ ರೀತಿ ಬದುಕಬೇಕು ಎಂಬುದನ್ನು ತಿಳಿಯುವುದರ ಜತೆಗೆ ಮಾನಸಿಕ ನೆಮ್ಮದಿ ದೊರೆಯುವುದು. ಅಧಿಕಾರ, ಆಸ್ತಿ, ಶ್ರೀಮಂತಿಕೆ ಇದ್ದರೂ ಸಹ ಮಾನಸಿಕ ನೆಮ್ಮದಿ ಇಲ್ಲದಿದ್ದರೆ ಮನುಷ್ಯನ ಜೀವನ ವ್ಯರ್ಥ. ಜೀವನದ ಮುಖ್ಯ ಗುರಿ ಮುಕ್ತಿ. ಸಾರ್ಥಕತೆ ಪಡೆಯಲು ಜೀವನ ದರ್ಶನ, ಪ್ರವಚನ ಮಾರ್ಗದರ್ಶನ ನೀಡುತ್ತದೆ ಎಂದರು.
ಜೀವನದಲ್ಲಿ ದೀನದಲಿತರ ಬಡವರ ಅವಕಾಶ ವಂಚಿತರ ಉಪಕಾರ ಮಾಡಿ ಕಣ್ಣೀರು ಒರಿಸುವ ಕೆಲಸ ಮಾಡಬೇಕು. ನಾವು ಬದುಕಲು ಜೊತೆಗೆ ನಮ್ಮವರನ್ನು ಬದುಕಿಸುವುದು ಎಂಬ ಸಮಷ್ಟಿ ಪ್ರಜ್ಞೆಯನ್ನು ಶ್ರೀಮಠ ಮತ್ತು ಶ್ರೀಗಳು ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಶಿವಶಾಂತವೀರ ಶರಣರು ಗ್ರಾಮೀಣ ಭಾಗದಲ್ಲಿ ಶಿಣದ ಮಹತ್ವದ ಅರಿತು ಶೈಣಿಕ ಸಂಸ್ಥೆಯ ಮೂಲಕ ಗುಣಮಟ್ಟ ಶಿಣ ನೀಡುವುದರ ಜೊತೆಗೆ ಶಿಣದ ಮೂಲಕ ಕೈಗೆ ಕೆಲಸ, ಹೊಟ್ಟೆಗೆ ಅನ್ನ ನೀಡುವ ಔದ್ಯೋಗಿಕ ಶಿಣ ನೀಡುತ್ತಿದ್ದಾರೆ ಎಂದರು.
ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ ಮಾತನಾಡಿ ಚನ್ನವಿರಶರಣರ ಸಾಮಾಜಿಕ ಕಳಕಳಿಯನ್ನು ಅವರ ಅಂತಃಕರಣವನ್ನು ನೆನೆದು ಪ್ರಸ್ತುತ ಶ್ರೀಗಳ ಸಮಾಜಮುಖಿ ಕಾರ್ಯಗಳನ್ನು ಹಾಗೂ ಶರಣರ ಒಡನಾಟವನ್ನು ಸ್ಮರಿಸಿದರು.
ಶಂಕ್ರಯ್ಯ ಗುರುಮಠ, ಹೇಮಂತಕುಮಾರ ಹಿರೇಮಠ, ವಿದ್ವಾನ್ ರವಿಕುಮಾರ, ಎಚ್. ಬಿ. ಯಲಬುಗಿರ್, ಸುನಂದಾ ಅಲ್ಲಂ, ಎಸ್. ಎಸ್. ಪುರಾಣಿಕಮಠ, ಶಿವಲಿಂಗಯ್ಯಶಾಸ್ತ್ರಿ ಸಿದ್ದಾಪೂರ ಇತರರು ಇದ್ದರು.