ದುಶ್ಚಟಗಳನ್ನು ಜೋಳಿಗೆಗೆ ಹಾಕಿಸಿಕೊಂಡ ಬಾಲ ಶಿವಯೋಗಿ

Bala Shivayogi who put the evils in the bag
ಹುಣಶ್ಯಾಳ ಪಿಬಿ ಹಿರೇಮಠದ ಬಾಲಶಿವಯೋಗಿ ಆನಂದ ದೇವರು ಗೊಳಸಂಗಿಯ ಇಂದಿರಾ ನಗರದಲ್ಲಿ ಜೋಳಿಗೆ ಹಿಡಿದು ಜನರಿಂದ ದುಶ್ಚಟಗಳನ್ನು ಬಿಡಿಸುವ ಜನಜಾಗೃತಿ ಯಾತ್ರೆ ನಡೆಸಿದರು.
Published on

ಗೊಳಸಂಗಿ: ಬಾಳಿ ಬದುಕಬೇಕಿದ್ದ ವಯಸ್ಸಿನಲ್ಲಿ ಮೋಜು&ಮಸ್ತಿಯ ವ್ಯಾಮೋಹಕ್ಕೆ ಒಳಗಾಗಿ, ದುಶ್ಚಟಗಳ ದಾಸರಾಗಿ ಬದುಕಿಗೆ ವಿದಾಯ ಹೇಳಿ ಹೋಗುತ್ತಿರುವ ಯುವ ಜನಾಂಗವನ್ನು ಸರಿದಾರಿಗೆ ತರುವ ಸಂಕಲ್ಪವನ್ನು ಹುಣಶ್ಯಾಳ ಪಿಬಿ ಹಿರೇಮಠದ ಬಾಲಶಿವಯೋಗಿ ಆನಂದ ದೇವರು ಕೈಗೊಂಡಿದ್ದಾರೆ.

ಗೊಳಸಂಗಿ ಗ್ರಾಮದಲ್ಲಿ ಕಳೆದ ಆರು ದಿನಗಳಿಂದ ದುಶ್ಚಟಗಳನ್ನು ಜೋಳಿಗೆಗೆ ಹಾಕಿರೆಂದು ಜನಜಾಗೃತಿ ಮೂಡಿಸುತ್ತ ಬೀದಿ ಬೀದಿಗಳಲ್ಲಿ ಸುತ್ತಾಡಿ ಭಿಾಟನೆ ಮಾಡುತ್ತಿದ್ದಾರೆ.

ಕೇವಲ ಆಶೀರ್ವಚನದ ಮೂಲಕ ಜನಜಾಗೃತಿ ಮೂಡಿಸುವ ಅದೆಷ್ಟೋ ಮಠಾಧೀಶರ ನಡುವೆ ತಮ್ಮ 18ನೇ ವಯಸ್ಸಿನಲ್ಲಿಯೇ ಸನ್ಯಾಸ ದೀೆ ಪಡೆದು ಬಾಲಶಿವಯೋಗಿಗಳಾಗಿ ಸದೃಢ ಸಮಾಜ ನಿರ್ಮಾಣದ ಸಂಕಲ್ಪ ಮಾಡಿದ ಆನಂದ ದೇವರ ಕಠಿಣ ತಪಸ್ಸನ್ನು ಕಂಡು ಗ್ರಾಮಸ್ಥರು ನಿಬ್ಬೆರಗಾಗಿದ್ದಾರೆ.

ಆರಂಭಿಕ ಹಂತದಲ್ಲಿ 30 ಊರುಗಳಲ್ಲಿ ಜನಜಾಗೃತಿ ಮೂಡಿಸುವ ಗುರಿಯನ್ನು ಹೊಂದಿರುವ ಶಿವಯೋಗಿಗಳು ಈಗಾಗಲೇ 23 ಗ್ರಾಮಳಲ್ಲಿ ಜನಜಾಗೃತಿ ಪೂರೈಸಿದ್ದಾರೆ.

ಆ.5 ರಿಂದ ಗೊಳಸಂಗಿಯಲ್ಲಿ ಜಾಗೃತಿ ಯಾತ್ರೆ ಆರಂಭಿಸಿದ್ದು, ಅದೆಷ್ಟೋ ಯುವಕರು ಬೀಡಿ, ಸಿಗರೇಟ್​, ಗುಟಕಾ, ಮದ್ಯಪಾನದಂಥ ದುಶ್ಚಟಗಳನ್ನು ತ್ಯಜಿಸುವುದಾಗಿ ಪ್ರಮಾಣ ಮಾಡಿ ಬಾಲ ಶಿವಯೋಗಿಗಳ ಜೋಳಿಗೆಗೆ ದುಶ್ಚಟಗಳನ್ನು ಹಾಕಿದ್ದಾರೆ.

ಹಲವಾರು ಭಕ್ತರು ಮಾರ್ಗಮಧ್ಯದಲ್ಲಿ ತಮ್ಮ ಮನೆಗೆ ಬಾಲಶಿವಯೋಗಿಗಳನ್ನು ಬರಮಾಡಿಕೊಂಡು ಪಾದಪೂಜೆ ಮಾಡುತ್ತಿದ್ದಾರೆ. ಭಾನುವಾರ ನಡೆದ ಜನಜಾಗೃತಿ ಯಾತ್ರೆಯಲ್ಲಿ ಶರಣಯ್ಯಸ್ವಾಮಿ ಬೀಳಗಿ, ಅಜಯ ಹಿರೇಮಠ, ಅಭಿಷೇಕ ಎತ್ತಿನಮನಿ, ರವಿ ಶಿರಸಂಗಿ, ಶ್ರೀಶೈಲ ದಂಡಿನ, ಸಂಗಪ್ಪ ಕೋಲಾರ, ಅಭಿಷೇಕ ಮೇಟಿ, ಗುರುಪಾದಪ್ಪ ಬಳಬಟ್ಟಿ, ಅಮರೇಶಗೌಡ ಪಾಟೀಲ, ರಾಮಗೊಂಡ ಮಮದಾಪುರ, ಶಿವಪ್ಪ ಅಡಗಿಮನಿ, ರಾವುತ ಸೀಮಿಕೇರಿ ಇತರರಿದ್ದರು.

ಪ್ರತಿದಿನ ರಾತ್ರಿ 8 ಗಂಟೆಗೆ ಬಸವೇಶ್ವರ ದೇವಾಲಯದಲ್ಲಿ ನಾಲತವಾಡದ ವೀರೇಶ್ವರ ಶ್ರೀಗಳ ಜೀವನ ಚರಿತ್ರೆ ಪ್ರವಚನವನ್ನು ಅಂಬಳನೂರ ಹಿರೇಮಠದ ಸಂಗಮನಾಥ ಶ್ರೀಗಳು ಆ.13 ರವರೆಗೆ ಹೇಳಲಿದ್ದಾರೆ.

ಈಗಾಗಲೇ ಗೊಳಸಂಗಿ ಗ್ರಾಮದ ಬಹುತೇಕ ಬೀದಿಗಳಲ್ಲಿ ಜನಜಾಗೃತಿ ಮೂಡಿಸಿದ ಬಾಲಶಿವಯೋಗಿ ಆನಂದ ದೇವರು ಆಗಸ್ಟ್​ 12 ರಂದು ಮಾದರಿ ಬಡಾವಣೆ, ಆಶ್ರಯ ಕಾಲನಿ ಮತ್ತು ಮುಜಾವರ ಮಡ್ಡಿಗಳಲ್ಲಿ ಜನಜಾಗೃತಿ ಯಾತ್ರೆ ನಡೆಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net