ಶ್ರೀ ಖಾಸ್ಗತ, ವಿರಕ್ತ ಶ್ರೀಗಳು ಭಕ್ತರ ಉದ್ಧಾರಕರು

Bala Shivayogi, Sri Siddhalinga God, Spiritual Discourse, Sri Khasgata, Virakta Sri, Talikote
ತಾಳಿಕೋಟೆ ಪಟ್ಟಣದ ಶ್ರೀ ಖಾಸ್ಗತೇಶ್ವರ ಮಠದಲ್ಲಿ ಶ್ರೀ ಖಾಸ್ಗತರ, ವಿರಕ್ತ ಶ್ರೀಗಳ ಪುಣ್ಯ ಸ್ಮರಣೋತ್ಸವ ಅಂಗವಾಗಿ ಮಂಗಳವಾರ ಪ್ರಾರಂಭಗೊಂಡ ಆಧ್ಯಾತ್ಮಿಕ ಪ್ರವಚನದಲ್ಲಿ ಪ್ರವಚನಕಾರ ಬಂಡಯ್ಯ ಶಾಸೀಗಳು ಮಾತನಾಡಿದರು.
Published on

ತಾಳಿಕೋಟೆ: ಶ್ರೀ ಖಾಸ್ಗತ ಮಹಾಶಿವಯೋಗಿಗಳು ಮತ್ತು ಲಿಂ. ಶ್ರೀ ವಿರಕ್ತ ಮಹಾ ಶಿವಯೋಗಿಗಳು ತಮ್ಮ ಜೀವನವನ್ನು ಭಕ್ತರ ಉದ್ಧಾರಕ್ಕೆ ಮೀಸಲಿಟ್ಟಂತಹ ಶಿವಯೋಗಿಗಳು ಎಂದು ಶ್ರೀ ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಶ್ರೀ ಸಿದ್ಧಲಿಂಗ ದೇವರು ಹೇಳಿದರು.

ಮಂಗಳವಾರ ಪಟ್ಟಣದ ಶ್ರೀ ಖಾಸ್ಗತೇಶ್ವರ ಮಠದಲ್ಲಿ 17 ರಿಂದ 22ರ ವರೆಗೆ ಪೂಜ್ಯ ಶ್ರೀ ಖಾಸ್ಗತ ಮಹಾಶಿವಯೋಗಿಗಳ 128ನೇ ಹಾಗೂ ಶ್ರೀ ವಿರಕ್ತ ಮಹಾ ಶಿವಯೋಗಿಗಳ 10ನೇ ವರ್ಷದ ಪುಣ್ಯಸ್ಮರಣೋತ್ಸವ ಅಂಗವಾಗಿ ಏರ್ಪಡಿಸಲಾದ ಆಧ್ಯಾತ್ಮಿಕ ಪ್ರವಚನ ಪ್ರಾರಂಭೋತ್ಸವ ಕಾರ್ಯಕ್ರಮ ನೇತೃತ್ವ ವಹಿಸಿ ಅವರು ಮಾತನಾಡಿದರು.

ನಡೆಯುವ ದಾರಿ ಸರಿ ಇಲ್ಲದಿದ್ದರೆ ಬದಲಾಯಿಸಿಕೊಳ್ಳಬಹುದು. ಆದರೆ ನುಡಿಯುವ ನಾಲಿಗೆ ಬದಲಾದರೆ ಬದಲಾಯಿಸುವುದು ಹೇಗೆ? ಮೈ ಚರ್ಮ ತೊಳೆದುಕೊಂಡರೆ ಪಾಪವು ಪರಿಹಾರ ಆಗುವುದಿಲ್ಲ. ಶ್ರೀ ಖಾಸ್ಗತರ ವಿರಕ್ತ ಶ್ರೀಗಳನ್ನು ಭಕ್ತಿಯಿಂದ ನೆನೆಯುವುದರ ಜೊತೆಗೆ ಪೂಜೆಗೈದರೆ ಜೀವನದಲ್ಲಿ ಪಾಪವಿಲ್ಲದೆ ಸಾರ್ಥಕ ಬದುಕು ಕಟ್ಟಿಕೊಳ್ಳಬಹುದು ಎಂದು ಹೇಳಿದರು.

ಪುರಾಣ ಪ್ರವಚನಕಾರ ಪ್ರವಚನ ರತ್ನ ಕಲ್ಬುರ್ಗಿ ಜಿಲ್ಲೆ ಸುಂಟನೂರ ಸಂಸ್ಥಾನ ಹಿರೇಮಠದ ಬಂಡಯ್ಯ ಶಾಸೀಗಳು ಮಾತನಾಡಿ, ಬಹಿರಂಗದ ಕೊಳೆಯನ್ನು ತೊಳೆದುಕೊಳ್ಳಲು ಸಾಮಗ್ರಿಗಳು ಬಹಳಷ್ಟಿವೆ. ಆದರೆ ಅಂತರಂಗದ ಕೊಳೆ ತೊಳೆದು ಕೊಳ್ಳುಲು ಶ್ರೀ ಖಾಸ್ಗತರಂತಹ ಮಹಾ ಶಿವಯೋಗಿಗಳ ಪುಣ್ಯಸ್ಮರಣೋತ್ಸವದಲ್ಲಿ ಪಾಲ್ಗೊಂಡು ಅದ್ಯಾತ್ಮದ ಸವಿ ಸವಿದಾಗ ಮಾತ್ರ ಜೀವನವು ಸಾರ್ಥಕವಾಗಲಿದೆ. ಐದು ದಿನ ನಡೆಯುವ ಪ್ರವಚನದಲ್ಲಿ ಭಕ್ತರು ಪಾಲ್ಗೊಳ್ಳಬೇಕೆಂದರು.

ಶ್ರೀ ಖಾಸ್ಗತೇಶ್ವರ ಮಠದ ಉಸ್ತುವಾರಿ ವೇ. ಮುರುಘೇಶ ವಿರಕ್ತಮಠ, ವೇ. ವಿಶ್ವನಾಥ ವಿರಕ್ತಮಠ, ವೇ. ಮಹಾಂತಯ್ಯ ವಿರಕ್ತಮಠ, ಗವಾಯಿಗಳಾದ ರಾಜಶೇಖರ ಗುಬ್ಬೇವಾಡ, ಬಸನಗೌಡ ಬಿರಾದಾರ, ಯಲ್ಲಪ್ಪ ಗುಂಡಳ್ಳಿ, ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net