ಅನಂತಾಚಾರ್ಯ ಕಟಗೇರಿ ದಾಸರಿಗೆ `ಬಲಭೀಮ' ಪ್ರಶಸ್ತಿ

14 Dwd 2 Vijayendra Desai
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಶ್ರೀ ನುಗ್ಗಿಕೇರಿ ಪ್ರಾಣದೇವರ ದೇವಸ್ಥಾನದ ವತಿಯಿಂದ ಪರ್ಯಾಯಸ್ಥರಾದ ಡಾ. ವಿಜಯೇಂದ್ರ ದೇಸಾಯಿ ಹಾಗೂ ಕುಟುಂಬದವರಿAದ ಅನಂತಾಚಾರ್ಯ ಬಾಳಾಚಾರ್ಯ ಕಟಗೇರಿ ದಾಸರಿಗೆ `ಬಲಭೀಮ' ಪ್ರಶಸ್ತಿ ಪ್ರದಾನ ಸಮಾರಂಭವನ್ನು ನ. 16ರಂದು ಸಂಜೆ 5 ಗಂಟೆಗೆ ದೇವಸ್ಥಾನದ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಡಾ. ವಿಜಯೇಂದ್ರ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧ್ವಾಚಾರ್ಯ ಮೊಕಾಶಿ, ಪದ್ಮಶ್ರೀ ಡಾ. ಎಂ.ಎ0. ಜೋಶಿ, ಡಾ. ಎಸ್.ಆರ್. ಕೌಲಗುಡ್, ಕೆ.ಜೆ. ಕಾಮತ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.

ದೇವಸ್ಥಾನದ ಪರ್ಯಾಯಸ್ಥರಿಂದ ಇದೇ ಮೊದಲ ಬಾರಿ ಬಲಭೀಮ ಪ್ರಶಸ್ತಿ ನೀಡಲಾಗುತ್ತಿದೆ. ನಾಡಿನ ಗಮಕ ಮತ್ತು ಕೀರ್ತನಾ ಕ್ಷೇತ್ರ ಕಂಡ ಅಪರೂಪದ ವಿದ್ವತ್ಮಣಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅನಂತಾಚಾರ್ಯ ಬಾಳಾಚಾರ್ಯ ಕಟಗೇರಿ ದಾಸರಿಗೆ ಪ್ರದಾನ ಮಾಡಲಾಗುವುದು. ಸಂಗೀತ ಕಟ್ಟಿ ಕುಲಕರ್ಣಿ ಅವರಿಂದ ದಾಸವಾಣಿ ಕಾರ್ಯಕ್ರಮ ಇರಲಿದೆ ಎಂದರು.

ಡಾ. ಸೌಭಾಗ್ಯ ಕುಲಕರ್ಣಿ, ಉದಯ ದೇಶಪಾಂಡೆ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net