

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಶ್ರೀ ನುಗ್ಗಿಕೇರಿ ಪ್ರಾಣದೇವರ ದೇವಸ್ಥಾನದಪರ್ಯಾಯಸ್ಥರಾದ ಡಾ. ವಿಜಯೇಂದ್ರ ದೇಸಾಯಿ ಹಾಗೂ ಕುಟುಂಬದವರಿ0ದ ದೇವಸ್ಥಾನದ ಆವರಣದಲ್ಲಿ ನಾಡಿನ ಗಮಕ ಮತ್ತು ಕೀರ್ತನಾ ಕ್ಷೇತ್ರದ ಅಪರೂಪದ ವಿದ್ವತ್ಮಣಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅನಂತಾಚಾರ್ಯ ಬಾಳಾಚಾರ್ಯ ಕಟಗೇರಿ ದಾಸರಿಗೆ ಶನಿವಾರ `ಬಲಭೀಮ' ಪ್ರಶಸ್ತಿ ಪ್ರದಾನ ಮಾಡಲಾಯಿತು.
ಡಾ. ವಿಜಯೇಂದ್ರ ದೇಸಾಯಿ, ಮಧ್ವಾಚಾರ್ಯ ಮೊಕಾಶಿ, ಪದ್ಮಶ್ರೀ ಡಾ. ಎಂ.ಎ0. ಜೋಶಿ, ಡಾ. ಎಸ್.ಆರ್. ಕೌಲಗುಡ್, ಕೆ.ಜೆ. ಕಾಮತ, ಡಾ. ಸೌಭಾಗ್ಯ ಕುಲಕರ್ಣಿ, ಉದಯ ದೇಶಪಾಂಡೆ, ಸಂಗೀತಾ ಕಟ್ಟಿ ಕುಲಕರ್ಣಿ, ಇತರರಿದ್ದರು.