

ನರಗುಂದ: ಮುಸ್ಲಿಂ ಸಮಾಜದವರು ದಂಡಾಪುರ ಬಡಾವಣೆಯ ಹೊರವಲಯದಲ್ಲಿರುವ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾಥರ್ನೆ ಕೈಗೊಂಡರು. ಮೌಲಾನಾ ಶಾಹಿ ಇಮಾಮ್ ಅಜಂ ಸರಖಾಜಿ ಮಾತನಾಡಿ, ತ್ಯಾಗ ಬಲಿದಾನದ ಪ್ರತೀಕವಾಗಿ ಬಕ್ರೀದ್ ಹಬ್ಬವನ್ನು ಮುಸ್ಲಿಮರು ಆಚರಿಸುತ್ತಾರೆ. ಈದ್ ಉಲ್-ಆಧಾವನ್ನು ಆರಾಫತ್ ಹಜ್‌ನ ಮುಖ್ಯ ಆಚರಣೆಯ ನಂತರ ಆಚರಿಸಲಾಗುತ್ತದೆ.ಧಾರ್ಮಿಕ ಗ್ರಂಥಗಳ ಪ್ರಕಾರ, ಸಮಾಜದ ಒಳಿತಿಗಾಗಿ ಬಕ್ರೀದ್ ಆಚರಣೆಯಲ್ಲಿದೆ ಎಂದರು.
ಅಲ್ಲಾಹ ತನ್ನ ಭಕ್ತನಾದ ಪ್ರವಾದಿ ಮೊಹಮ್ಮದ್‌ನ ಕನನಸಿನಲ್ಲಿ ಬಂದು ನಿನಗೆ ಇಷ್ಟವಾಗಿದ್ದನ್ನು ನನಗೆ ನೀಡುವಂತೆ ಹೇಳುತ್ತಾರೆ. ಆಗ ಪ್ರವಾದಿ ಮೊಹಮ್ಮದ್ ತಾನು ಇಷ್ಟಪಡುತ್ತಿದ್ದ ಮಹಮದ್ ಇಸ್ಮಾಯಿಲ್‌ನನ್ನು ಅಲ್ಲಾಹಗೆ ತ್ಯಾಗ ಮಾಡಲು ಸಿದ್ಧ್ದನಾಗುತ್ತಾನೆ. ಮಗನನ್ನು ಬಲಿ ಕೊಡಲು ಮುಂದಾದಾಗ ಅಲ್ಲಾಹ ಎದುರು ಇಸ್ಮಾಯಿಲ್ ಬದಲು ಕುರಿಯೊಂದು ಕಾಣಿಸಿಕೊಳ್ಳುತ್ತದೆ. ಆದರೆ ಅದು ಅಲ್ಲಾಹ ಕಳಿಸಿದ ದೈವೀಕುರಿಯಾಗಿರುತ್ತದೆ. ಅಂದಿನಿಂದ ಈ ದಿನವನ್ನು ಬಕ್ರೀದ್ ಎಂದು ಕರೆಯಲಾಗುತ್ತದೆ. ಈ ಘಟನೆಯು ಅಲ್ಲಾಹನಲ್ಲಿ ಭಕ್ತಿ, ನಂಬಿಕೆ ಇದ್ದರೆ ಎಲ್ಲರನ್ನೂ ಆತ ರಕ್ಷಿಸುತ್ತಾನೆ ಎಂದು ಹೇಳುವ ಸಂಕೇತವಾಗಿದೆ ಎಂದು ಹೇಳಿದರು.
ಮುಸ್ಲಿಮರಿಗೆ ಮೌಲಾನಾ ಶಾಹಿ ಇಮಾಮ್ ಅಜಂ ಸರಖಾಜಿ ಅಲ್ಲಾಹನ ಬೋಧನೆಗಳನ್ನು ತಿಳಿಸಿದರು. ಇದಕ್ಕೂ ಪೂರ್ವ ಕಸಬಾ ಪತ್ತೆ ಮಸೀದಿಯಿಂದ ಮುಸ್ಲಿಮರು ಈದ್ಗಾ ಮೈದಾನಕ್ಕೆ ಮೆರವಣಿಗೆ ಮೂಲಕ ತೆರಳಿದರು. ಸಂಪ್ರದಾಯದಂತೆ ಕುದುರೆ ಮೇಲೆ ಮುಸ್ಲಿಂ ಬಾಲಕರನ್ನು ಈದ್ಗಾ ಮೈದಾನಕ್ಕೆ ಕರೆತರಲಾಯಿತು.
ಈದ್ಗಾದಲ್ಲಿ ಜರುಗಿದ ಪ್ರಾರ್ಥನೆಯಲ್ಲಿ ಅಮ್ಜದ್ ಖಾಜಿ, ಐ.ಪಿ. ಚಂದೂನವರ, ಎಂ.ಎಂ. ಖಾಜಿ, ಜಹೀರ ಅಹ್ಮದ ಖಾಜಿ, ಬಾಬೂಸಾಬ ಜಮಾದಾರ, ರಜಾಕ್ ಸಕಲಿ, ಇಮಾಮಸಾಬ್ ನದಾಫ್, ಹಜರತ್‌ಅಲಿ ಮುಲ್ಲಾ, ಝ. ಎಂ. ಖಾಜಿ, ಅಲ್ಲಾಭಕ್ಷಿ ಸಂಶಿ, ಮಹಮದ್ ನಾಯ್ಕರ್, ಶಾಬುದ್ದೀನ ನದಾಫ್ ಭಾಗಿಯಾಗಿದ್ದರು.