ಶಾಂತಿಯುತವಾಗಿ ಬಕ್ರೀದ್​ ಆಚರಿಸಬೇಕು

oplus_2
oplus_2
Published on

ಚನ್ನಮ್ಮನ ಕಿತ್ತೂರು: ಬಕ್ರೀದ್​ ಹಬ್ಬದ ವೇಳೆ ಸಾರ್ವಜನಿಕರು ಶಾಂತಿಯುತವಾಗಿ ಹಬ್ಬ ಆಚರಿಸಬೇಕು ಎಂದು ಡಿವೆಎಸ್ಪಿ ಡಾ. ವೀರಯ್ಯ ಹಿರೇಮಠ ಹೇಳಿದರು. ಪಟ್ಟಣದ ಪೊಲೀಸ್​ ಠಾಣೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಕ್ರೀದ್​ ಹಬ್ಬದ ಪೂರ್ವಭಾವಿ ಶಾಂತಿಸಭೆಯಲ್ಲಿ ಮಾತನಾಡಿದರು. ಹಬ್ಬದ ವೇಳೆಯಲ್ಲಿ ಯಾವುದೇ ಅಹಿತಕರ ಅವಡಗಳಿಗೆ ಅವಕಾಶ ನೀಡದೆ ಕಾನೂನು ಪಾಲಿಸುವ ಮೂಲಕ ಹಬ್ಬ ಆಚರಿಸಬೇಕು ಎಂದು ಹೇಳಿದರು.

ಸಿಪಿಐ ಶಿವಾನಂದ ಗುಡಗನಟ್ಟಿ ಮಾತನಾಡಿ, ಯಾವುದೇ ಅಹಿತಕರ ಚಟುವಟಿಕೆ ಕಂಡುಬಂದಲ್ಲಿ ಕೂಡಲೇ ಸಾರ್ವಜನಿಕರು ಪೊಲೀಸ್​ ಠಾಣೆಗೆ ಮಾಹಿತಿ ನೀಡಬೇಕು. ಯಾವುದೇ ಕಾರಣಕ್ಕೂ ಕಾನೂನು ಕೆಗೆತ್ತಿಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದರು. ಪಿಎಸ್​ಐ ಪ್ರವಿಣ ಗಂಗೋಳ ಮಾತನಾಡಿ, ಹಿಂದು&ಮುಸ್ಲಿಮರು ಒಟ್ಟಾಗಿ ಶಾಂತಿಗೆ ಭಂಗ ಬಾರದಂತೆ ಎಚ್ಚರಿಕೆ ವಹಿಸಬೇಕು ಎಂದರು. ಪೊಲೀಸ್​ ಅಧಿಕಾರಿಗಳು, ಸಿಬ್ಬಂದಿ, ಪಪಂ ಸದಸ್ಯರು, ವಿವಿಧ ಸಮುದಾಯದ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net