ಬಜರಂಗದಳ ಪಿಎಫ್‌ಐಗೂ ಹೋಲಿಕೆ ಸಲ್ಲ

CM BOMMAYI
Published on

ಗದಗ: ಬಜರಂಗದಳ ನಿಷೇಧ ವಿಷಯವನ್ನು ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ಸೇರ್ಪಡೆ ಮಾಡಿರುವುದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.

ಜಿಲ್ಲೆಯ ಶಿರಹಟ್ಟಿ ಪಟ್ಟಣದಲ್ಲಿ ಮಂಗಳವಾರ ರೋಡ್ ಶೋಗೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಅಧಿಕಾರಕ್ಕೆ ಬರೋದೇ ಇಲ್ಲ ಅಂದ ಮೇಲೆ ಬ್ಯಾನ್ ಮಾಡೋದ್ ಎಲ್ಲಿ ಬಂತು’ ಎಂದು ವ್ಯಂಗ್ಯವಾಡಿದರು.

‘ಸಾಮಾಜಿಕ, ಧಾರ್ಮಿಕ ಕೆಲಸ ಮಾಡುತ್ತಿರುವ ಬಜರಂಗಕ್ಕೆ ನಿಷೇಧ ಹೇರುವ ಪ್ರಶ್ನೆಯೇ ಇಲ್ಲ.

ದೇಶವಿರೋಧಿ ಸಂಘಟನೆ ಪಿಎಫ್‌ಐಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ. ಅಂತಹ ಸಂಘಟನೆಯನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ. ಪಿಎಫ್‌ಐಗೂ ಬಜರಂಗದಳಕ್ಕೂ ಹೋಲಿಕೆ ಸರಿಯಲ್ಲ.

ಮೇಲಾಗಿ, ಬಜರಂಗದಳ ನಿಷೇಧ ಮಾಡುವ ಅಧಿಕಾರ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಇದೆ ಎಂದು ಸಿಎಂ ಸ್ಪಷ್ಟಪಡಿಸಿದರು.

ನೀರು ಕೊಡುತ್ತೇವೆ, ಮಹಿಳೆಯರಿಗೆ ಉಚಿತ ಪಾಸ್ ಕೊಡುತ್ತೇವೆ ಎನ್ನುವ ಕಾಂಗ್ರೆಸ್‌ಗೆ ಈಗಾಗಲೇ ಬಿಜೆಪಿ ಸರ್ಕಾರ ಇದೆಲ್ಲವನ್ನು ಜನರಿಗೆ ನೀಡಿದೆ ಎಂಬುದರ ಅರಿವು ಇಲ್ಲ ಎಂದು ಬೊಮ್ಮಾಯಿ ಹರಿಹಾಯ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net