ನಗರದಲ್ಲಿ ಬಜರಂಗ ಸೇನೆ ಪ್ರತಿಭಟನೆ: ಹಿಂದು ಯುವಕರ ಮೇಲಿನ ಹಲ್ಲೆಗೆ ಖಂಡನೆ

Bajrang Sena protest mandya
Published on

ಮಂಡ್ಯ: ನಾಗಮಂಗಲದಲ್ಲಿ ಮುಸ್ಲಿಂ ಸಮುದಾಯದವರು ಪೂರ್ವ ಯೋಜಿತ ತಯಾರಿ ನಡೆಸಿ ಗಣೇಶ ಮೆರವಣಿಗೆ ನಡೆಸುವ ವೇಳೆ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿ ನಗರದಲ್ಲಿ ಬಜರಂಗ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಶಾಂತಿಯುತವಾಗಿ ಹೋಗುತ್ತಿದ್ದ ಗಣಪತಿ ಮೆರವಣಿಗೆ ಮೇಲೆ ಕಲ್ಲು, ಪೆಟ್ರೋಲ್ ಬಾಂಬ್, ಲಾಂಗ್, ಮಚ್ಚುಗಳಿಂದ ದಾಳಿ ಮಾಡಿದ್ದಾರೆ. ಚಪ್ಪಲಿ ತೂರಿದ್ದಾರೆ ಎಂದು ಆರೋಪಿಸಿದರು.

ಪೊಲೀಸರ ಮೇಲೆ ದಾಳಿ ಮಾಡಿರುವುದಲ್ಲದೇ ಹಿಂದುಗಳ ಅಂಗಡಿಗಳು ಹಾಗೂ ವಾಹನಗಳನ್ನು ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿರುವುದು ಅತ್ಯಂತ ಖಂಡನೀಯ. ಹಿಂದುಗಳು ಮುಸ್ಲಿಂರಿಗೆ ಸಹಕಾರ ಹಾಗೂ ರಕ್ಷಣೆ ನೀಡುತ್ತಾ ಬಂದಿದ್ದರೂ, ಅವರಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ನಾಗಮಂಗಲದಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಸಮಾಜಘಾತಕ ಶಕ್ತಿಗಳು ಯಾರೆಂಬ ಮಾಹಿತಿ ಪೊಲೀಸ್ ಇಲಾಖೆಗೆ ಸ್ಪಷ್ಟವಾಗಿ ಗೊತ್ತಿರುತ್ತದೆ. ಅಂತಹ ಕಿಡಿಗೇಡಿಗಳನ್ನು ಗುರುತಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸೇನೆಯ ರಾಜ್ಯಾಧ್ಯಕ್ಷ ಮಂಜುನಾಥ್, ಮುಖಂಡರಾದ ಸತೀಶ್, ಚೇತನ್, ರಾಮಚಂದ್ರು, ಸವ್ಯಸಾಚಿ, ಆದಿತ್ಯ, ಮರೀಗೌಡ, ರಮೇಶ್, ಅನಿಲ್‌ಕುಮಾರ್, ನಂದೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net