ಮಾಂಸಹಾರಕ್ಕೆ ಬೇಡಿಕೆ ಬೇಜವಾಬ್ದಾರಿ ವರ್ತನೆ: ಬಜರಂಗ ದಳದ ರಾಜ್ಯಾಧ್ಯಕ್ಷ ಮಂಜುನಾಥ್ ಟೀಕೆ

Bajrang Dal State President Press Note
Published on

ಮಂಡ್ಯ: ಮೂರು ದಶಕದ ಬಳಿಕ ಆಯೋಜನೆಗೊಳ್ಳುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಹಾರಕ್ಕೆ ಬೇಡಿಕೆ ಇಡುತ್ತಿರುವುದು ಬೇಜವಾಬ್ದಾರಿ ವರ್ತನೆ ಎಂದು ಬಜರಂಗ ದಳದ ರಾಜ್ಯಾಧ್ಯಕ್ಷ ಬಿ.ಮಂಜುನಾಥ್ ಟೀಕಿಸಿದ್ದಾರೆ.

ನಗರದ ಹೊರವಲಯದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಅತ್ಯಂತ ಸಂತೋಷ ಸಂಗತಿ. ಈ ಭುವನೇಶ್ವರಿ ಜಾತ್ರೆಯನ್ನು ಎಲ್ಲರೂ ಒಟ್ಟಾಗಿ ಸೇರಿ ಅತ್ಯಂತ ಶ್ರದ್ಧೆಯಿಂದ ಹಾಗೂ ಸಂಭ್ರಮದಿಂದ ಯಶಸ್ವಿಗೊಳಿಸಬೇಕು. ಜಿಲ್ಲಾಡಳಿತ ಎಲ್ಲ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಿರುವ ಈ ಸಮಯದಲ್ಲಿ ಕೆಲವು ಸ್ವಯಂ ಘೋಷಿತ ಪ್ರಗತಿಪರರು ಸಮ್ಮೇಳನದಲ್ಲಿ ಮಾಂಸಹಾರ ನೀಡಬೇಕೆಂದು ಬೇಡಿಕೆ ಇಟ್ಟಿರುವುದು ಅತ್ಯಂತ ಬೇಜವಾಬ್ದಾರಿ ವರ್ತನೆ ಎಂದಿದ್ದಾರೆ.

ದೇಶದ ನಾನಾ ಭಾಗಗಳಿಂದ ಸಸ್ಯಹಾರ ಸಂಪ್ರದಾಯದ ಸಾವಿರಾರು ಜನರು ಬರುತ್ತಾರೆ. ಅವರಿಗೆ ಮುಜುಗರ ಅಗುವ ಕೆಲಸವನ್ನು ನಾವು ಮಾಡಬಾರದು. ಅತಿಥಿ ದೇವೋಭವ ಎನ್ನುವ ನಾವು ಯಾರಿಗೂ ಮಾನಸಿಕ ನೋವನ್ನು ಕೊಡಬಾರದು. ಪ್ರಗತಿಪರರು ಮೊದಲಿಂದಲೂ ವಿಘ್ನ ಸಂತೋಷಿಗಳು, ಯಾವುದಾದರೂಂದು ಕೆಲಸ ಅಚ್ಚುಕಟ್ಟಾಗಿ ನಡೆಯುತ್ತದೆಂದು ಗೊತ್ತಾದರೆ ಇಲ್ಲಸಲ್ಲದ ವಾದಗಳನ್ನು ಮುಂದಿಟ್ಟು ವ್ಯವಸ್ಥೆಯನ್ನು ಹಾಳು ಮಾಡುವುದು ಅವರ ಕೆಲಸ. ಹಾಗಾಗಿ ಯಾವುದೇ ಕಾರಣಕ್ಕೂ ಜಿಲ್ಲಾಡಳಿತ ಮಾಂಸಹಾರವನ್ನು ಮಾಡಬಾರದೆಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net