

ಮಂಡ್ಯ: ಮುಸ್ಲಿಮರಿಗೆ ಅಕ್ರಮವಾಗಿ ಜಮೀನು ಖಾತೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ಮಹದೇವಪುರ ಗ್ರಾಮದಲ್ಲಿ ನಡೆದ ಅದಾಲತ್‌ನಲ್ಲಿ ಕಾಂಗ್ರೆಸ್ ಶಾಸಕ ರಮೇಶ ಬಂಡಿಸಿದ್ದೇಗೌಡ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವುದು ಅಭಿನಂದನಾರ್ಹ ಎಂದು ಬಜರಂಗ ದಳದ ಮೈಸೂರು ವಿಭಾಗೀಯ ಸಂಯೋಜಕ ಬಸವರಾಜು ತಿಳಿಸಿದರು.
ರಾಜ್ಯದಲ್ಲಿ ಮುಸ್ಲಿಮರಿಂದ ಜಮೀನು ಜಿಹಾದ್ ನಡೆಸಲಾಗುತ್ತಿದ್ದು, ಇದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ. ಬಗರ್ ಹುಕುಂ ಹೆಸರನಲ್ಲಿ ಸರ್ಕಾರಿ ಭೂಮಿಯಲ್ಲಿ ಉಳುಮೆ ಮಾಡುವ ರೈತರಿಗೆ ಭೂಮಿಯನ್ನು ನೀಡುವ ಕಾರ್ಯದ ಹೆಸರಿನಲ್ಲಿ ಅಧಿಕಾರಿಗಳು ಲಂಚ ಪಡೆದು ಉಳಿಮೆ ಮಾಡದ ಕೆಲ ಮುಸ್ಲಿಮರಿಗೆ ಜಮೀನು ಮಂಜೂರು ಮಾಡಿದ್ದಾರೆ. ಈಗ ಅವರ ಹೆಸರನಲ್ಲಿ ಆರ್‌ಟಿಸಿ ಲಭ್ಯವಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಶಾಸಕ ರಮೇಶ ಬಂಡಿಸಿದ್ದೇಗೌಡ ದರಖಾಸ್ತು ಸಮಿತಿ ಅಧ್ಯಕ್ಷರೂ ಆಗಿದ್ದು, ಅವರ ಗಮನಕ್ಕೂ ಬಾರದಂತೆ ಅಧಿಕಾರಿ ವರ್ಗವು ಸರ್ಕಾರಿ ಭೂಮಿಯನ್ನು ಮುಸ್ಲಿಮರಿಗೆ ನೀಡಿದ್ದಾರೆ. ಇದರಲ್ಲಿ ಬಾಂಗ್ಲಾದೇಶದಿಂದ ಮೈಸೂರಿಗೆ ಆಗಮಿಸಿದ ಮುಸ್ಲಿಮರೂ ಸೇರಿದ್ದಾರೆ. ಅವರಿಗೆ ಉಳಿದುಕೊಳ್ಳಲು ಸ್ಥಳ ಇಲ್ಲದ ಕಾರಣ ಈ ಅಕ್ರಮವಾಗಿ ಸರ್ಕಾರಿ ಭೂಮಿ ಪಡೆಯಲು ಮುಂದಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಬಜರಂಗ ದಳದ ಪುನೀತ್, ಕುಮಾರ್, ರವಿ ಇದ್ದರು.