ಹುಟ್ಟು ಹಬ್ಬದಂದು ಪ್ರಕೃತಿಗೆ ಕೊಡುಗೆ ನೀಡಿ ವಿಶ್ವ ಪರಿಸರದ ದಿನಾಚರಣೆಯಲ್ಲಿ ಶಿಕ್ಷಕಿ ಚಿತ್ರಾಶ್ರೀ ಹೇಳಿಕೆ

mng--5 June Holi Family school
Published on

ಮಂಗಳೂರು: ಪ್ರತಿಯೊಬ್ಬರೂ ಬಾಲ್ಯದಿಂದಲೇ ಹುಟ್ಟು ಹಬ್ಬದಂದು ಗಿಡ ನೆಟ್ಟು ಬೆಳೆಸುವ ಹವ್ಯಾಸ ರೂಢಿಸಿಕೊಂಡಾಗ ಪ್ರಕೃತಿಗೆ ನಾವು ಬಹು ದೊಡ್ಡ ಉಡುಗೊರೆ ನೀಡಿದಂತಾಗುತ್ತದೆ ಎಂದು ಬಡಗ ಎಕ್ಕಾರು ಸರ್ಕಾರಿ ಪ್ರೌಢಶಾಲಾ ಶಿಕ್ಷಕಿ ಚಿತ್ರಾಶ್ರೀ ಹೇಳಿದರು.

'
ಬಜ್ಪೆ ಹೋಲಿ ಫ್ಯಾಮಿಲಿ ಪ್ರೌಢಶಾಲೆಯಲ್ಲಿ ಜರಗಿದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಜಾತಿಯ ಹಣ್ಣಿನ ಗಿಡ ವಿತರಿಸಿ ಅವರು ಮಾತನಾಡಿದರು.

ಶಾಲಾ ಮುಖ್ಯ ಶಿಕ್ಷಕಿ ಭ.ಜೆಸ್ಸಿ ಪ್ರೀಮ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ವಿದ್ಯಾರ್ಥಿಗಳಿಗೆ ಉತ್ತಮ ಜಾತಿಯ ಕಸಿ ಮಾಡಿದ ನೇಂದ್ರ ಬಾಳೆ ಗಿಡ, ಲಕ್ಷ್ಮಣ ಫಲ, ರಾಮಫಲ, ಲಿಂಬೆ, ನೀಲಂ ಮಾವಿನ , ಅಂಟುರಹಿತ , ಚಂದ್ರ ಪೇರಳೆ, ಶ್ವೇತ ಪೇರಳೆ ಸ್ಟಾರ್ ಹಣ್ಣಿನ ಗಿಡ ವಿತರಿಸಿ ಶಾಲೆಯ ಸುತ್ತ ಗಿಡ ನಡೆಲಾಯಿತು.

ವಿದ್ಯಾರ್ಥಿಗಳು ಪರಿಸರ ರಕ್ಷಣೆಯ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಮಕ್ಕಳಿಂದ ಪರಿಸರ ಕುರಿತು ಹಣ್ಣಿನ ಗಿಡಗಳ ಮಹತ್ವ ಸಾರುವ ರೂಪಕ, ಪರಿಸರ ಗೀತೆ ಹಾಗೂ ಪರಿಸರ ಜಾಗೃತಿಯ ಭಾಷಣ ನಡೆಯಿತು.

ಪರಿಸರ ಸಂಘದ ಅಧ್ಯಕ,್ಷ ಶಿಕ್ಷಕ ವಾಸುದೇವ ರಾವ್ ಕುಡುಪು ಶಿಕ್ಷಕ ಪ್ರಶಾಂತ್, ಶಿಕ್ಷಕಿಯರಾದ ಲಿಲ್ಲಿ ಮೀನೇಜಸ್, ,ಯಶೋಧ, ಗೀತಾಂಬ, ಶ್ರೀಧನ್ಯ ಕುಮಾರಿ,ಶ್ರೀಜ ಉಪಸ್ಥಿತರಿದ್ದರು. ಪರಿಸರ ಸಂಘದ ಕಾರ್ಯದರ್ಶಿ ಪ್ರಿಯಾಂಕ ಉಪಸ್ಥಿತರಿದ್ದರು. ಅರ್ಚನಾ ಸ್ವಾಗತಿಸಿದರು. ಶ್ವೇತ ವಂದಿಸಿದರು. ನಾಗರತ್ನ ಕಾರ್ಯಕ್ರಮ ನಿರೂಪಿಸಿದರು.'

ಬಜ್ಪೆ ಹೋಲಿ ಫ್ಯಾಮಿಲಿ ಪ್ರೌಢಶಾಲೆಯಲ್ಲಿ ಜರಗಿದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಜಾತಿಯ ಹಣ್ಣಿನ ಗಿಡ ವಿತರಿಸಿ ಅವರು ಮಾತನಾಡಿದರು.

ಶಾಲಾ ಮುಖ್ಯ ಶಿಕ್ಷಕಿ ಭ.ಜೆಸ್ಸಿ ಪ್ರೀಮ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ವಿದ್ಯಾರ್ಥಿಗಳಿಗೆ ಉತ್ತಮ ಜಾತಿಯ ಕಸಿ ಮಾಡಿದ ನೇಂದ್ರ ಬಾಳೆ ಗಿಡ, ಲಕ್ಷ್ಮಣ ಫಲ, ರಾಮಫಲ, ಲಿಂಬೆ, ನೀಲಂ ಮಾವಿನ , ಅಂಟುರಹಿತ , ಚಂದ್ರ ಪೇರಳೆ, ಶ್ವೇತ ಪೇರಳೆ ಸ್ಟಾರ್ ಹಣ್ಣಿನ ಗಿಡ ವಿತರಿಸಿ ಶಾಲೆಯ ಸುತ್ತ ಗಿಡ ನಡೆಲಾಯಿತು.

ವಿದ್ಯಾರ್ಥಿಗಳು ಪರಿಸರ ರಕ್ಷಣೆಯ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಮಕ್ಕಳಿಂದ ಪರಿಸರ ಕುರಿತು ಹಣ್ಣಿನ ಗಿಡಗಳ ಮಹತ್ವ ಸಾರುವ ರೂಪಕ, ಪರಿಸರ ಗೀತೆ ಹಾಗೂ ಪರಿಸರ ಜಾಗೃತಿಯ ಭಾಷಣ ನಡೆಯಿತು.
ಪರಿಸರ ಸಂಘದ ಅಧ್ಯಕ,್ಷ ಶಿಕ್ಷಕ ವಾಸುದೇವ ರಾವ್ ಕುಡುಪು ಶಿಕ್ಷಕ ಪ್ರಶಾಂತ್, ಶಿಕ್ಷಕಿಯರಾದ ಲಿಲ್ಲಿ ಮೀನೇಜಸ್, ,ಯಶೋಧ, ಗೀತಾಂಬ, ಶ್ರೀಧನ್ಯ ಕುಮಾರಿ,ಶ್ರೀಜ ಉಪಸ್ಥಿತರಿದ್ದರು. ಪರಿಸರ ಸಂಘದ ಕಾರ್ಯದರ್ಶಿ ಪ್ರಿಯಾಂಕ ಉಪಸ್ಥಿತರಿದ್ದರು. ಅರ್ಚನಾ ಸ್ವಾಗತಿಸಿದರು. ಶ್ವೇತ ವಂದಿಸಿದರು. ನಾಗರತ್ನ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net