ಬಜ್ಪೆ ವ್ಯವಸಾಯ ಸೇವಾ ಸಹಕಾರಿ ಸಾಮಾನ್ಯ ಸಭೆ: ಸದಸ್ಯರಿಗೆ ಶೇ.20 ಡಿವಿಡೆಂಡ್ ಘೋಷಣೆ

Kin_Bajpe
Published on

ಬಜ್ಪೆ: ಬಜ್ಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನ ವಾರ್ಷಿಕ ಸಾವಾನ್ಯ ಸಭೆ ಬಜ್ಪೆ ಕೇಂದ್ರ ಕಚೇರಿಯ ಸಹಕಾರ ವಜ್ರ ಸಭಾಭವನದಲ್ಲಿ ಸಂಸ್ಥೆಯ ಅಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು ಅಧ್ಯಕ್ಷತೆಯಲ್ಲಿ ನಡೆಯಿತು.

ಮೋನಪ್ಪ ಶೆಟ್ಟಿ ಎಕ್ಕಾರು ಮಾತನಾಡಿ, ನಿರ್ದೇಶಕರ, ಸರ್ವ ಸದಸ್ಯರ ಸಹಕಾರದಿಂದ ಸಂಸ್ಥೆ ಉತ್ತಮವಾಗಿ ಬೆಳೆಯುತ್ತಿದೆ. 2023-24ನೇ ಸಾಲಿನ ಅಂತ್ಯಕ್ಕೆ ಬ್ಯಾಂಕ್ 16.56 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.20 ಡಿವಿಡೆಂಡ್ ನೀಡಲಾಗುತ್ತಿದೆ. ಬ್ಯಾಂಕ್‌ನ ದುಡಿಯುವ ಬಂಡವಾಳ 600 ಕೋಟಿ ರೂ. ಆಗಿದ್ದು, 351 ಕೋಟಿ ರೂ. ಠೇವಣಿ ಹೊಂದಿದೆ. 51 ಕೋಟಿ ರೂ. ಪಾಲು ಬಂಡವಾಳವಿದೆ ಎಂದರು.

ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ಪ್ರೆಸಿಲ್ಲಾ ಪೆರೆರಾ 2023-24ನೇ ಸಾಲಿನ ಲೆಕ್ಕಪತ್ರಗಳ ವರದಿ ಮಂಡನೆ ವಾಡಿದರು. ಬ್ಯಾಂಕ್‌ನ ನಿರ್ದೇಶಕರಾದ ವಸಂತ, ಡಾ.ಎಂ.ಎನ್.ರಾಜೇಂದ್ರ ಕುವಾರ್, ಡೇನೀಸ್ ಡಿಸೋಜ, ಸ್ಟಾೃನಿ ಡಿಸೋಜ, ರಿತೇಶ್ ಶೆಟ್ಟಿ, ಭಾಸ್ಕರ ಮಲ್ಲಿ, ಗೀತಾ ಕೆ.ಅಮೀನ್, ಮೋಹನ್, ಮೊಹಮ್ಮದ್ ಶರ್ೀ, ಕವಿತಾ, ಗೀತಾ, ಕಿರಣ್ ಕುವಾರ್ ಶೆಟ್ಟಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net