

ಮೂಡುಬಿದಿರೆ: ಮುಂಬೈಗೆ ಪರಾರಿಯಾಗಲು ತಯಾರಾಗಿ ಖಾಸಗಿ ಬಸ್ ಏರಿದ್ದ ಮುಸ್ಲಿಂ ಯುವಕ ಹಾಗೂ ಹಿಂದು ಯುವತಿ ಜೋಡಿಯನ್ನು ಬಜರಂಗದಳ ತಂಡ ಗುರುಪುರ ಕೈಕಂಬದಲ್ಲಿ ತಡೆದಿದೆ.
ಜೋಡಿ ಪರಾರಿ ಯತ್ನ ಕುರಿತು ಮಂಗಳೂರು ಬಜರಂಗದಳ ಕಾರ್ಯಕರ್ತರು ಮೂಡುಬಿದಿರೆ ಬಜರಂಗದಳ ಕಾರ್ಯಕರ್ತರಿಗೆ ಮಾಹಿತಿ ರವಾನಿಸಿದ್ದು ಈ ಹಿನ್ನಲೆಯಲ್ಲಿ ಬಸ್ ತಡೆದಿದ್ದಾರೆ.
ಮಂಗಳೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರೂ ಮುಂಬೈಗೆ ಪರಾರಿಯಾಗಲು ಸಿದ್ಧತೆ ನಡೆಸಿದ್ದರು. ಜೋಡಿ ಮೂಡುಬಿದಿರೆ ಪೊಲೀಸರ ವಶದಲ್ಲಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದು, ಸತ್ಯಾಂಶ ಇನ್ನಷ್ಟೇ ಹೊರಬರಬೇಕಿದೆ.