

ಸಕಲೇಶಪುರ : ಹೇಮಾವತಿ ಸೇತುವೆ ವಿಪತ್ತು ನಿರ್ವಹಣಾ ರಸ್ತೆಯನ್ನು ಮುಚ್ಚಿ ನಿರ್ಮಿಸಲಾಗಿರುವ ಕಟ್ಟಡ ತೆರವುಗೊಳಿಸುವಂತೆ ಬಜರಂಗದಳದ ಕಾರ್ಯಕರ್ತರು ತಾಲೂಕು ಪಂಚಾಯಿತಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಮಳಲಿ ಗ್ರಾಪಂ ವ್ಯಾಪ್ತಿಯ ಸೇರ್ವೇ ನಂ. 278 ರಲ್ಲಿ ಭತ್ತದ ಗದ್ದೆಗೆ ಅಕ್ರಮವಾಗಿ ಮಣ್ಣು ತುಂಬಿ ತುರ್ತು ನಿರ್ವಹಣಾ ರಸ್ತೆಯನ್ನು ಮುಚ್ಚಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಕಟ್ಟಡ ನಿರ್ಮಾಣಕ್ಕಾಗಲಿ, ಕಟ್ಟಡದಲ್ಲಿರುವ ಅಂಗಡಿಗಳಿಗಾಗಲಿ ಗ್ರಾ.ಪಂ.ನಿಂದ ಯಾವುದೇ ಪರವಾನಗಿ ಪಡೆದಿಲ್ಲ. ಅಕ್ರಮವಾಗಿ ನಿರ್ಮಾಣ ಮಾಡಿರುವ ಕಟ್ಟಡಕ್ಕೆ ವಿದ್ಯುತ್ ನೀಡಲು ಮಳಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ನಿರಾಕ್ಷೇಪಣಾ ಪತ್ರ ನೀಡುವ ಮೂಲಕ ಅಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಈ ಬಗ್ಗೆ ಕ್ರಮ ವಹಿಸಬೇಕು. ಕಟ್ಟಡ ತೆರವುಗೊಳಿಸಬೇಕು ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ರಾಮಚಂದ್ರ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಭಜರಂಗದಳದ ದಕ್ಷಿಣ ಪ್ರಾಂತ ಪ್ರಮುಖ ರಘು, ಧರ್ಮೇಶ್, ಮಂಜುನಾಥ್, ಪ್ರತಾಪ್ ಇತರರು ಇದ್ದರು.